ಮುಂಬೈ[ಸೆ.18]: ಬಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಸಿನಿ ಕ್ಷೇತ್ರದಲ್ಲಿ ಬಿಸಿ ಬಿಸಿ ಸುದ್ದಿಗಳಿಗೆ ಮಾತ್ರ ಬರವಿಲ್ಲ. ಕೆಲವೊಮ್ಮೆ ನಟ, ನಟಿಯರ ನಡುವಿನ ಅಫೇರ್ ಸದ್ದು ಮಾಡಿದ್ರೆ, ಮತ್ತೊಮ್ಮೆ ಮದುವೆಯ ಊಹಾಪೋಹಗಳು. ಹೀಗಿರುವಾಗ ಸದ್ಯ ಸ್ಟಾರ್ ನಟ ಶಹೀದ್ ಕಪೂರ್ ಹಾಗೂ ಮೀರಾ ರಜಪೂತ್ ಮೂರನೇ ಮಗುವಿನ ನಿರಿಕ್ಷೆಯಲ್ಲಿದ್ದಾರೆಂಬ ಸುದ್ದಿ ಬಿ ಟೌನ್ ನಲ್ಲಿ ಸದ್ದು ಮಾಡುತ್ತಿದೆ.

ಶಾಹೀದ್ ಹಾಗು ಮೀರ ದಂಪತಿಗೆ ಮಿಶಾ ಮತ್ತು ಝೈನ್ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹೀಗಿರುವಾಗಲೇ ಮೀರಾ ಮತ್ತೆ ಗರ್ಭಿಣಿ ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಆದರೆ ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಹೀದ್ ಕಪೂರ್ 'ಮೀರಾ ಈಗಾಗಲೇ ಮ್ಯಾಗಜೀನ್ ಶೂಡ್ ಮುಗಿಸಿದ್ದಾರೆ, ಮತ್ತೊಂದು ಫೋಟೋ ಶೂಟ್ ಗೆ ಸಜ್ಜಾಗುತ್ತಿದ್ದಾರೆ. ಹೀಗಿರುವಾಗ ಮೀರಾ ಗರ್ಭಿಣಿ ಎಂದು ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು' ಎಂದಿದ್ದಾರೆ.

 
 
 
 
 
 
 
 
 
 
 
 
 

Promises to keep 🌸

A post shared by Mira Rajput Kapoor (@mira.kapoor) on Aug 15, 2019 at 4:20am PDT

ಕಳೆದ ಬಾರಿ, ಎರಡನೇ ಮಗುವಿನ ನಿರಿಕ್ಷೆಯಲ್ಲಿದ್ದ ಶಾಹಿದ್ ಸಂಪತಿ ಇಂತಹ ವದಂತಿಯನ್ನು ತಳ್ಳಿ ಹಾಕಿದ್ದರು ಎಂಬುವುದು ಉಲ್ಲೇಖನೀಯ.