ಹ್ಯಾಪಿ ಬರ್ತ್ ಡೇ ರಿಷಬ್ ಶೆಟ್ಟಿ! ಬರ್ತ್ ಡೇ ಗಿಫ್ಟ್ ಏನು ಗೊತ್ತಾ?

Rishab Shetty Birthday today
Highlights

ತಮ್ಮ ಸಿನಿಮಾಗಳಲ್ಲಿ ಯಾವಾಗಲೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಹೊಸ ಹೊಸ ಸಿನಿಮಾಗಳನ್ನು ನೀಡುವ ರಿಷಬ್ ಶೆಟ್ಟಿ ಹುಟ್ಟುಹಬ್ಬ ಇಂದು. ಸ್ಯಾಂಡಲ್’ವುಡ್’ನಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ರಿಷಬ್ ಶೆಟ್ಟಿ. ಇನ್ನುಂದೆ  ಒಳ್ಳೊಳ್ಳೆ ಸಿನಿಮಾಗಳನ್ನು ನೀಡುವಂತಾಗಲಿ ಎಂದು ಆಶಿಸುತ್ತಾ ಹ್ಯಾಪಿ ಬರ್ತ್ ಡೇ ಅನ್ನೋಣವೇ? 

ಬೆಂಗಳೂರು (ಜು. 07): ಸರ್ಕಾರ ಕನ್ನಡ ಶಾಲೆಗಳನ್ನು ವಿಲೀನಗೊಳಿಸುವ ಹುಮ್ಮಸ್ಸಿನಲ್ಲಿರುವ ಹೊತ್ತಿಗೆ, ಕಾಸರಗೋಡಿನಂಥ ಗಡಿನಾಡಲ್ಲಿ ಕನ್ನಡ ಶಾಲೆಯ ಸ್ಥಿತಿಗತಿ ಹೇಗಿದೆ ಅನ್ನುವ ಸಿನಿಮಾ ಮಾಡುತ್ತೇನೆ ಅಂತ ಹೊರಟವರು ರಿಷಬ್ ಶೆಟ್ಟಿ.

ಕಿರಿಕ್ ಪಾರ್ಟಿ ಮುಗಿದದ್ದೇ ತಡ, ನಾನು ಮಾಡೋ ಕೆಲಸ ಬೇರೆಯೇ ಇದೆ. ಮೊದಲು ಅದನ್ನು ಮುಗಿಸುತ್ತೇನೆ ಅಂತ ತನ್ನಿಷ್ಟದ ಮಕ್ಕಳ ಸಿನಿಮಾ ಮಾಡಲು ಕಡಲತಡಿಗೆ ಹೊರಟು ನಿಂತ ಈ ರಿಕ್ಕಿ ರಿಷಬ್ ಹುಟ್ಟುಹಬ್ಬ ಇವತ್ತು. ರಿಷಬ್ ಮುಂದೇನು ಮಾಡುತ್ತಾರೆ? ನಿರ್ದೇಶನವೋ ನಟನೆಯೋ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಸದ್ಯಕ್ಕಂತೂ ಅವರ ಕೈಲಿ ಎರಡು ಸಿನಿಮಾಗಳಿವೆ. ಬೆಲ್ ಬಾಟಮ್ ಇನ್ನೇನು ಮುಗಿಯಲಿದೆ. ಅದೇ ಹೊತ್ತಿಗೆ ಕಿರುತೆರೆಯ ತಾಂತ್ರಿಕ ಮಾಂತ್ರಿಕ ವಿನು ಬಳಂಜ ಹೊಸ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಹೆಸರು ನಾಥೂರಾಮ್. ಈ ಚಿತ್ರದಲ್ಲಿ ನಾಥೂರಾಮ್ ಪಾತ್ರದಲ್ಲಿ ನಟಿಸಲು ರಿಷಬ್ ಒಪ್ಪಿಕೊಂಡಿದ್ದಾರೆ.

ನಾಥೂರಾಮ್ ನಟನಾ ಪ್ರತಿಭೆಯನ್ನೇ ನೆಚ್ಚಿಕೊಂಡಿರುವ ಸಿನಿಮಾ. ವಿನು ಬಳಂಜ ಹೇಳಿಕೇಳಿ ವಿಚಿತ್ರ ಶೈಲಿಯ ಕತೆಗಳಿಗೆ ಹೆಸರಾದವರು. ಅವರ ಸಿನಿಮಾದಲ್ಲೊಂದು ವಿಶಿಷ್ಟ ಪಾತ್ರವನ್ನು ಸೃಷ್ಟಿಸಿ ಅದನ್ನು ರಿಷಬ್‌ಗೆ ಹುಟುಹಬ್ಬದ ಕೊಡುಗೆಯಾಗಿ ಕೊಡಲಿದ್ದಾರೆ ವಿನು ಈ ಮಧ್ಯೆ ರಿಷಬ್ ಕೈಲಿ ಹಲವಾರು ಪ್ರಾಜೆಕ್ಟುಗಳಂತೂ ಇವೆ. ಆಗಸ್ಟ್‌ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಿಲೀಸ್ ಆಗಲಿದೆ. ಅದಾದ ನಂತರ ಕಥಾಸಂಗಮ ಹೆಗಲೇರಲಿದೆ. ಆಮೇಲೆ
ಬೆಲ್‌ಬಾಟಮ್, ಅದರ ಬೆನ್ನಿಗೇ ನಾಥೂರಾಮ್. ಇದರ ಮಧ್ಯೆ ಅವನೇ ಶ್ರೀಮನ್ನಾರಾಯಣದಲ್ಲಿ ಒಂದು ಪಾತ್ರ.

ಇವೆಲ್ಲ ನಡೆಯುತ್ತಿದ್ದ ಹಾಗೇ, ಬಾಲಿವುಡ್ ಅವರನ್ನು ಕೈ ಬೀಸಿ ಕರೆಯುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ... ಚಿತ್ರವನ್ನು ಹಿಂದಿಯಲ್ಲಿ ನಿರ್ಮಾಣ ಮಾಡಲು ಸಂಸ್ಥೆಯೊಂದು ಮುಂದೆ ಬಂದಿದೆ. ಮತ್ತೊಂದು ಕತೆಯೂ ಆ ಸಂಸ್ಥೆಗೆ ಒಪ್ಪಿಗೆಯಾಗಿದೆ. ಮಾತುಕತೆ ಪೂರ್ತಿಯಾಗುತ್ತಿದ್ದಂತೆ ಹಿಂದಿ ಸಿನಿಮಾ ನಿರ್ದೇಶನಕ್ಕೆ ರಿಷಬ್ ಮುಂಬೈಗೆ ಹೊರಡಲಿದ್ದಾರೆ. ಹುಟ್ಟುಹಬ್ಬದ ಹೊಸಿಲಲ್ಲಿ ನಿಂತವರ ಹತ್ತಿರ, ನಿಮ್ಮ ಫೇವರಿಟ್ ನಟನೆಯೋ ನಿರ್ದೇಶನವೋ ಎಂದು ಕೇಳಿದಾಗ, ಬಂದದ್ದು ನಟಿಸಲು. ಅವಕಾಶ ಸಿಕ್ಕಿದ್ದು ನಿರ್ದೇಶಕನಾದ ನಂತರ. ಹಾಗಾಗಿ ನಟನೆ ಫಸ್ಟ್ ಲವ್, ನಿರ್ದೇಶನ ವೈಫು ಅಂದರು. ಅವರ ಮೊದಲ ಪ್ರೇಮವೂ ದಾಂಪತ್ಯವೂ ಸುಖಕರವಾಗಿರಲಿ. ಹ್ಯಾಪಿ ಬರ್ತಡೇ ರಿಷಬ್! 

loader