ಶ್ರೀದೇವಿ ಜೀವನ ಕುರಿತು ಅಮರಪ್ರೇಮಿ ನಿರ್ದೇಶಕ ರಾಂಗೋಪಾಲ್‌ ಸಿನೆಮಾ

RGV to make biopic of sridevi
Highlights

ಬಾಲಿವುಡ್‌ ಖ್ಯಾತ ನಟಿ ಶ್ರೀದೇವಿ ನಿಧನಕ್ಕೆ ಇಡೀ ದೇಶ ಶೋಕತಪ್ತವಾಗಿರುವಾಗಲೇ ಚಿತ್ರನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ, ಶ್ರೀದೇವಿ ಜೀವನದ ಕುರಿತು ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ವರ್ಮಾ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಮುಂಬೈ: ಬಾಲಿವುಡ್‌ ಖ್ಯಾತ ನಟಿ ಶ್ರೀದೇವಿ ನಿಧನಕ್ಕೆ ಇಡೀ ದೇಶ ಶೋಕತಪ್ತವಾಗಿರುವಾಗಲೇ ಚಿತ್ರನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ, ಶ್ರೀದೇವಿ ಜೀವನದ ಕುರಿತು ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ವರ್ಮಾ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಆದರೆ, ಚಿತ್ರಸಾಹಿತಿ ಸಿರಾಸ್ರಿ ತೆಲುಗು ಟೀವಿ ವಾಹಿನಿಯೊಂದರ ಚರ್ಚೆಯ ವೇಳೆ ಈ ಬಗ್ಗೆ ಸುಳಿವು ನೀಡಿದ್ದಾರೆ. ಕಥೆ ಸಿದ್ಧವಾದ ಬಳಿಕ ರಾಮ್‌ಗೋಪಾಲ್‌ ವರ್ಮಾ ಅಧಿಕೃತವಾಗಿ ಚಿತ್ರವನ್ನು ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ.

ರಾಮ್‌ಗೋಪಾಲ್‌ ವರ್ಮಾ ಅವರ ಕ್ಷಣಂ ಕ್ಷಣಂ ತೆಲುಗು ಚಿತ್ರದಲ್ಲಿ ಶ್ರೀದೇವಿ ಅಭಿನಯಿಸಿದ್ದರು. ಜೊತೆಗೆ ಶ್ರೀದೇವಿ, ಭೂಲೋಕಲದ ಅತಿಸುಂದರಿ ಎಂದು ಹಿಂದಿನಿಂದಲೂ ವರ್ಮಾ ಹೊಗಳಿಕೊಂಡು ಬಂದಿದ್ದರು.

loader