ಈ ಚಿತ್ರದ ಹೆಸರು ‘ಗುಳ್ಟು'. ಜಗತ್ತಿನ ಯಾವ ಡಿಕ್ಷನರಿನಲ್ಲೂ ಹುಡುಕಿದರೂ ಈ ಪದ ಸಿಗಲ್ಲ! ಕೊನೆಗೂ ಗರುಡ ಪುರಾಣದಲ್ಲೂ ಈ ಪದ ಕಾಣವುದು ಡೌಟು. ಇಂಥ ಚಿತ್ರ- ವಿಚಿತ್ರ ಹೆಸರಿನೊಂದಿಗೆ ಒಂದಿಷ್ಟುಹೊಸಬರೇ ಸೇರಿಕೊಂಡು ಒಂದು ಸಿನಿಮಾ ಮಾಡಿದ್ದಾರೆ. ನಟನೆಯ ಕನಸು ಕಾಣುತ್ತ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನವೀನ್‌ ಶಂಕರ್‌ ಈ ಚಿತ್ರದ ನಾಯಕ. ಸೋನು ಗೌಡ ಇದರ ನಾಯಕಿ. ರಂಗಾಯಣ ರಘು, ಅವಿನಾಶ್‌ರಂತಹ ಗಟ್ಟಿಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜನಾರ್ಧನ್‌ ಚಿಕ್ಕಣ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕ ಸಿಂಪಲ್‌ ಸುನಿ ಈ ಚಿತ್ರದ ಮೊದಲ ಲುಕ್‌ಗೆ ಫಿದಾ ಆಗಿ ತಾವೇ ಚಿತ್ರದ ಪೋಸ್ಟರ್‌ ಅನ್ನು ತಮ್ಮ ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿರುವುದು ಈ ಚಿತ್ರತಂಡದವರ ಶ್ರಮಕ್ಕೆ ಸಿಕ್ಕ ಮೊದಲ ಮೆಚ್ಚುಗೆ. ಚಿತ್ರದ ಪೋಸ್ಟರ್‌ ನೋಡಿದಾಗ ‘ಇಲ್ಲೇನೋ ಬೇರೆಯದ್ದೇ ಆದ ಕತೆ ಇದೆ' ಎಂದುಕೊಂಡೇ ನಿರ್ದೇಶಕರಾದ ರಕ್ಷಿತ್‌ ಶೆಟ್ಟಿ, ಹೇಮಂತ್‌ ರಾವ್‌, ಆ ದಿನಗಳು ಚೈತನ್ಯ ಸೇರಿದಂತೆ ಹಲವರು ಚಿತ್ರದ ಫಸ್ಟ್‌ ಲುಕ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಹಾಗಾದರೆ ‘ಗುಳ್ಟು' ಅಂದರೆ ಏನು? ಎನ್ನುವ ಪ್ರಶ್ನೆಗೆ ಚಿತ್ರದ ನಾಯಕ ನವೀನ್‌ ಶಂಕರ್‌ ಉತ್ತರಿಸಲಾರೆ ಎನ್ನುತ್ತಾರೆ. ‘ಯಾವ ಡಿಕ್ಷನರಿನಲ್ಲಿ ಈ ಪದ ಇಲ್ಲ. ಆದರೆ, ನಾವು ಯಾವ ಕಾರಣಕ್ಕೆ ಈ ಹೆಸರು ಇಟ್ಟುಕೊಂಡಿದ್ದೇವೆ ಎಂದು ಹೇಳಿದರೆ ಕತೆ ಹೇಳಿದಂತೆ ಆಗುತ್ತದೆ. ಹೀಗಾಗಿ ಇದರ ಅರ್ಥ ಸಿನಿಮ ಬಿಡುಗಡೆಯ ನಂತರ ತಿಳಿಯಿರಿ. ಕಳೆದ ನಾಲ್ಕೈದು ತಿಂಗಳುಗಳಿಂದ ತಯಾರಿ ಮಾಡಿಕೊಂಡು ಈ ಸಿನಿಮಾ ಮಾಡಿದ್ದೇವೆ. ನಮ್ಮ ಮೊದಲ ಕನಸು ಇದು. ಮಾತಿನ ಭಾಗದ ಚಿತ್ರೀಕರಣವನ್ನು ಸಂಪೂರ್ಣವಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದು, ಹಾಡುಗಳ ಶೂಟಿಂಗ್‌ಗಾಗಿ ಪಾಂಡಿಚೆರಿಗೆ ಹೋಗುವ ಪ್ಲಾನ್‌ ಇದೆ. ಈ ಸಿನಿಮಾ ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕತೆಯನ್ನು ಒಳಗೊಂಡಿದೆ. ನಾವು ಇದುವರೆಗೂ ಕಂಡಿರದ ಒಂದು ಮಾಫಿಯಾ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ನನಗೆ ಗೊತ್ತಿರುವಂತೆ ಇಂಥ ಕತೆಯ ಚಿತ್ರ ಬಂದಿಲ್ಲ. ಇಲ್ಲಿ ಲವ್‌, ಗೆಳೆತನ, ಫ್ಯಾಮಿಲಿ ಸೆಂಟಿಮೆಂಟ್‌ನ ನೆರಳು ಇದ್ದರೂ ಹೆಚ್ಚಾಗಿ ಫೋಕಸ್‌ ಮಾಡಿರುವುದು ಕ್ರೈಮ್‌ ನೆರಳನ್ನೇ' ಎನ್ನುತ್ತಾರೆ ಚಿತ್ರದ ನಾಯಕ ನವೀನ್‌ ಶಂಕರ್‌.

ಬಾಗಲಕೋಟೆ ಜಿಲ್ಲೆಯ ಚಿಕ್ಕಆದಾಪುರದ ನವೀನ್‌ ಶಂಕರ್‌ ಓದಿದ್ದು ಇಂಜಿನಿಯರಿಂಗ್‌, ಮುಖ ಮಾಡಿದ್ದ ಪತ್ರಿಕೋದ್ಯಮದ ಕಡೆಗೆ, ಕನಸು ಕಂಡಿದ್ದು ನಟನಾಗುವುದು. ಈ ನಡುವೆ ರಂಗಭೂಮಿಯಲ್ಲೂ ತೊಡಗಿಸಿಕೊಂಡು ರಾಜಮಾರ್ಗ ಕಲಾ ಸಾಂಸ್ಕೃತಿಕ ತಂಡದಲ್ಲಿ ಒಂದಿಷ್ಟುನಾಟಕಗಳಲ್ಲಿ ನಟಿಸಿದ್ದಾರೆ. ಈಗ ‘ಗುಳ್ಟು' ಮೂಲಕ ಹೀರೋ ಆಗಿದ್ದಾರೆ. ಆದರೆ, ತನ್ನ ಫಸ್ಟ್‌ ಲುಕ್‌ನಿಂದಲೇ ಇಷ್ಟೆಲ್ಲ ಮೆಚ್ಚುಗೆಗೆ ಕಾರಣವಾಗುತ್ತಿರುವ ಈ ಚಿತ್ರಕ್ಕೆ ಆರಂಭದಲ್ಲಿ ನಿರ್ಮಾಪಕರು ಸಿಕ್ಕಿರಲಿಲ್ಲ. ಆಗಲೇ ನವೀನ್‌ ಶಂಕರ್‌ ಹಾಗೂ ಜನಾರ್ಧನ್‌ ಚಿಕ್ಕಣ್ಣ ಮತ್ತವರ ತಂಡ ಸೇರಿ ಚಿತ್ರದ ಪೂರ್ವ ತಯಾರಿ ಹಂತದಲ್ಲೇ ಮಾಡಿಕೊಂಡಿದ್ದ ವಿಡಿಯೋ ನೋಡಿ ಚಿತ್ರಕ್ಕೆ ನಿರ್ಮಾಪಕರು ಸಿಕ್ಕಿದ್ದಾರೆ. ಪ್ರಶಾಂತ್‌ ರೆಡ್ಡಿ ಹಾಗೂ ದೇವರಾಜ್‌ ನಿರ್ಮಾಣದ ಈ ಚಿತ್ರಕ್ಕೆ ಅಮಿತ್‌ ಆನಂದ್‌ ಸಂಗೀತ, ಶಾಂತಿ ಸಾಗರ್‌ ಕ್ಯಾಮೆರಾ ಹಿಡಿದಿದ್ದಾರೆ.

ವರದಿ: ಕನ್ನಡಪ್ರಭ, ಸಿನಿವಾ