ಟಾಲಿವುಡ್’ಗೆ ಹಾರಿದ್ದಾರೆಯೇ ರಶ್ಮಿಕಾ ಮಂದಣ್ಣ?

First Published 21, Mar 2018, 12:53 PM IST
Rashmika Mandanna Act in  Tollywood
Highlights

ರಶ್ಮಿಕಾ ಮಂದಣ್ಣ ಮತ್ತೊಂದು ತೆಲುಗು ಚಿತ್ರಕ್ಕೆ ಬುಕ್ ಆಗಿದ್ದಾರೆಯೇ? ಹೌದು, ಎನ್ನುತ್ತಿವೆ ಟಾಲಿವುಡ್  ಮೂಲಗಳು. ನಾಗಶೌರ್ಯ ಜತೆ ತೆಲುಗಿನಲ್ಲಿ ಯಶಸ್ವಿ ‘ಚಲೋ’ ನಂತರ ವಿಜಯ್ ದೇವರಕೊಂಡ ಜತೆ ಮತ್ತೊಂದು ಚಿತ್ರಕ್ಕೆ ನಾಯಕಿ ಆದರು.

ಬೆಂಗಳೂರು (ಮಾ. 21): ರಶ್ಮಿಕಾ ಮಂದಣ್ಣ ಮತ್ತೊಂದು ತೆಲುಗು ಚಿತ್ರಕ್ಕೆ ಬುಕ್ ಆಗಿದ್ದಾರೆಯೇ? ಹೌದು, ಎನ್ನುತ್ತಿವೆ ಟಾಲಿವುಡ್  ಮೂಲಗಳು. ನಾಗಶೌರ್ಯ ಜತೆ ತೆಲುಗಿನಲ್ಲಿ ಯಶಸ್ವಿ ‘ಚಲೋ’ ನಂತರ ವಿಜಯ್ ದೇವರಕೊಂಡ ಜತೆ ಮತ್ತೊಂದು ಚಿತ್ರಕ್ಕೆ ನಾಯಕಿ ಆದರು.

ಈಗ  ಅಕ್ಕಿನೇನಿ ನಾಗಾರ್ಜುನ ಹಾಗೂ ನಾನಿ ನಟನೆಯ ಹೊಸ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆಂಬ  ಸುದ್ದಿ ಇದೆ. ಸದ್ಯಕ್ಕೆ ನಾನಿ ‘ಎಂಸಿಎ’ ನಂತರ ‘ಕೃಷ್ಣಾರ್ಜುನ  ಯುದ್ಧಂ’ ಚಿತ್ರ ಮಾಡುತ್ತಿದ್ದು, ಇದು ಬಿಡುಗಡೆಯ ಹಂತಕ್ಕೆ
ಬಂದಿದೆ. ಮತ್ತೊಂದು ಕಡೆ ನಾಗಾರ್ಜುನ ಅವರು ರಾಮ್  ಗೋಪಾಲ್ ವರ್ಮಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರು ತಮ್ಮ ಮುಂದಿರುವ ಚಿತ್ರಗಳನ್ನು ಮುಗಿಸಿಕೊಂಡು ಬಂದ ಮೇಲೆ  ಸೆಟ್ಟೇರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎನ್ನುತ್ತಿದ್ದಾರೆ. ಈಗ ರಶ್ಮಿಕಾ ಕನ್ನಡದಲ್ಲಿ ‘ಯಜಮಾನ’ನ ಮುಂದೆ ನಟಿಸುತ್ತಿದ್ದಾರೆ. 

loader