ತೆಲುಗಿಗೆ ಹಾರಿದ ರಶ್ಮಿಕಾ ಮಂದಣ್ಣ

Rashmika Mandanna act in Telugu Movie
Highlights

ನಟಿ ರಶ್ಮಿಕಾ ಮಂದಣ್ಣ ಮುಂದೆ ಮತ್ತೊಂದು ತೆಲುಗು ಸಿನಿಮಾ ಎದ್ದು ನಿಂತಿದೆ. ಚಿತ್ರದ ಹೆಸರು ‘ಡಿಯರ್ ಕಾಮ್ರೇಡ್’. ಇದು ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್  ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಮೊನ್ನೆಯಷ್ಟೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮೈತ್ರಿ  ಮೂವೀಸ್ ಮೇಕರ್ಸ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಭರತ್ ಕಮ್ಮ ಎಂಬುವವರು ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರು (ಮೇ. 14): ನಟಿ ರಶ್ಮಿಕಾ ಮಂದಣ್ಣ ಮುಂದೆ ಮತ್ತೊಂದು ತೆಲುಗು ಸಿನಿಮಾ ಎದ್ದು ನಿಂತಿದೆ. ಚಿತ್ರದ ಹೆಸರು ‘ಡಿಯರ್ ಕಾಮ್ರೇಡ್’. ಇದು ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್  ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಸಿನಿಮಾ. 

ಮೊನ್ನೆಯಷ್ಟೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮೈತ್ರಿ  ಮೂವೀಸ್ ಮೇಕರ್ಸ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಭರತ್ ಕಮ್ಮ ಎಂಬುವವರು ನಿರ್ದೇಶಿಸುತ್ತಿದ್ದಾರೆ. ‘ಚಲೋ’ ಚಿತ್ರದ ನಂತರ ಟಾಲಿವುಡ್‌ನಲ್ಲಿ ಸ್ಟಾರ್  ಆಗಿರುವ ಕನ್ನಡದ ‘ಕಿರಿಕ್ ಪಾರ್ಟಿ’ ಹುಡುಗಿಗೆ ತೆಲುಗಿನಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. 

ತೆಲುಗಿನಲ್ಲಿ ಮೊದಲ ಚಿತ್ರವೇ ಹಿಟ್ ಆಗಿದ್ದು ಕೂಡ ಅದಕ್ಕೊಂದು ಕಾರಣ. ಈ ಚಿತ್ರದ ನಂತರ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಅಕ್ಕಿನೇನಿ ಕುಟುಂಬದ ನಾಗಾರ್ಜುನ ಕಾಂಬಿನೇಷನ್‌ನ  ಚಿತ್ರವೊಂದಕ್ಕೂ ನಾಯಕಿಯಾಗಿ ಆಗಿದ್ದಾರೆ. ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಇದಕ್ಕೂ ಮೊದಲೇ ವಿಜಯ್ ದೇವರಕೊಂಡ ಜತೆ ಹೆಜ್ಜೆ ಹಾಕುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಚಿತ್ರದ  ಹೆಸರು ಹಾಗೂ ಫಸ್ಟ್ ಲುಕ್ ಬಹಿರಂಗಗೊಂಡಿದ್ದು, ಚಿತ್ರದ ಹೆಸರಿನ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಅದರ ಜತೆಗೆ ಇದು ದುಲ್ಖರ್ ಸನ್ಮಾನ್ ನಟನೆಯಲ್ಲಿ ಬಂದ ‘ಸಿಐಎ’ ಚಿತ್ರದ ರೀಮೇಕಾ? ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಯಾಕೆಂದರೆ ಸಿಐಎ ಅಂದ್ರೆ ಕಾಮ್ರೇಡ್ ಇನ್ ಅಮೆರಿಕ ಎಂಬುದು. ಇಲ್ಲೂ ವಿಜಯ್ ದೇವರಕೊಂಡ ಚಿತ್ರದಲ್ಲೂ ಕಾಮ್ರೇಡ್ ಬಳಕೆ ಆಗಿದೆ. ಆದರೆ, ಸಿಐಎ ಚಿತ್ರಕ್ಕೂ ಡಿಯರ್ ಕಾಮ್ರೇಡ್ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಚಿತ್ರತಂಡ ಕೂಡ ಹೇಳಿಕೊಂಡಿದೆ. ಚಿತ್ರದ ಫಸ್ಟ್ ಅನ್ನು ತಮ್ಮ ಟ್ವಿಟ್‌ರ್ ಖಾತೆಯಲ್ಲಿ  ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ನಟ ವಿಜಯ್ ದೇವರಕೊಂಡ ನಟನೆಯ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದ್ದು, ಅದರ ಲುಕ್ ತುಂಬಾ ಚೆನ್ನಾಗಿದೆ. ಒಳ್ಳೆಯ ಸಿನಿಮಾದಲ್ಲಿ ನಾನೂ ಇದ್ದೀನಿ ಎನ್ನುವುದು ಸಂಭ್ರಮದ ಸಂಗತಿ’ ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಶ್ಮಿಕಾ ಅವರ ಕೈಯಲ್ಲಿ ಎರಡು ತೆಲುಗು ಸಿನಿಮಾಗಳು. ಇವೆ. ಸದ್ಯಕ್ಕೆ ಕನ್ನಡದಲ್ಲಿ ದರ್ಶನ್ ಜತೆ
‘ಯಜಮಾನ’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. 

loader