ರಣಬೀರ್ ಕಪೂರ್'ಗೆ ಹೊಸ ಗರ್ಲ್ ಫ್ರೆಂಡ್

Ranbir Kapoor confirms he is dating Alia Bhatt, says it’s really new
Highlights

ಈ ಸಂದರ್ಭದಲ್ಲಿ ತಾವು ಆಲಿಯಾ ಭಟ್ ಜೊತೆ ಹೆಚ್ಚು ಸಲುಗೆಯಿರುವುದಾಗಿ ಪತ್ರಕರ್ತರೆದುರು ಬಹಿರಂಗ ಪಡಿಸಿದರು. ಕೆಲವು ದಿನಗಳಿಂದ ನಮ್ಮಿಬ್ಬರಲ್ಲಿ ಸಲುಗೆ ಹೆಚ್ಚಾಗಿದೆ. ಭಾವನೆಗಳು ಒಂದು ಗೂಡುತ್ತಿವೆ. ಇಬ್ಬರೂ ಡೇಟಿಂಗ್ ಕೂಡ ಹೋಗುತ್ತಿದ್ದೇವೆ. ನಮ್ಮಿಬ್ಬರ ಜೊತೆಗಿನ ಆತ್ಮೀಯತೆಗೆ ಹೆಚ್ಚು ರೆಕ್ಕೆಪುಕ್ಕ ಹಚ್ಚಬೇಡಿ ಮಧ್ಯಮದೆದುರು ವಿನಂತಿಸಿಕೊಂಡರು.  

ಬಾಲಿವುಡ್'ನಲ್ಲಿ ಸಿನಿಮಾ ಮಂದಿ ಗರ್ಲ್ ಫ್ರೆಂಡ್'ಗಳನ್ನು ಬದಲಿಸುವುದು ಮಾಮೂಲಿ ವಿಷಯ. ಈ ಸಾಲಿಗೆ ನಾಯಕ ರಣಬೀರ್ ಕಪೂರ್ ಸೇರ್ಪಡೆಯಾಗಿದ್ದಾರೆ.
ಆಲಿಯಾ ಭಟ್ ತಮ್ಮ ಹೊಸ ಸ್ನೇಹಿತೆ ಎಂದು ರಣಬೀರ್ ಸ್ವತಃ ಮಾಧ್ಯಮದ ಮುಂದೆ ಒಪ್ಪಿಕೊಂಡಿದ್ದಾರೆ.

ಹಲವು ಸಿನಿಮಾ ಹೆಣ್ಣು ಮಕ್ಕಳ ಹಿಂದೆ ಓಡಾಡಿದ್ದ ರಣಬೀರ್'ಗೆ ಒಂದಷ್ಟು ಮಂದಿ ಅವರೇ ಕೈಕೊಟ್ಟಿದ್ದರು, ಇನ್ನುಳಿದವರಿಗೆ ತಾವು ಸೋಡಾ ಚೀಟಿ ನೀಡಿದ್ದರು. ಬಾಲಿವುಡ್'ನಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ನಾಯಕಿಯಲ್ಲಿ ಆಲಿಯಾ ಭಟ್ ಮುಂಚೂಣಿ ಸ್ಥಾನದಲ್ಲಿದ್ದಾರೆ. ರಣಬೀರ್ ಮುದ್ದುಮುಖದ ನಟನಾದರೂ ಅವರ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ  ಹೆಚ್ಚು ಗೆಲುವಿನ ಹೊಸ್ತಿಲಿನ ಸಮೀಪ ದಾಟುತ್ತಿಲ್ಲ.

ರಾಜ್ ಕುಮಾರ್ ಇರಾನಿ ನಿರ್ದೇಶನದ ಈಗಷ್ಟೆ ಬಿಡುಗಡೆಯಾಗಲಿರುವ ಸಂಜು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಎಲ್ಲ ಲಕ್ಷಣ ಕಾಣುತ್ತಿವೆ. ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ತಾವು ಆಲಿಯಾ ಭಟ್ ಜೊತೆ ಹೆಚ್ಚು ಸಲುಗೆಯಿರುವುದಾಗಿ ಪತ್ರಕರ್ತರೆದುರು ಬಹಿರಂಗ ಪಡಿಸಿದರು. ಕೆಲವು ದಿನಗಳಿಂದ ನಮ್ಮಿಬ್ಬರಲ್ಲಿ ಸಲುಗೆ ಹೆಚ್ಚಾಗಿದೆ. ಭಾವನೆಗಳು ಒಂದು ಗೂಡುತ್ತಿವೆ. ಇಬ್ಬರೂ ಡೇಟಿಂಗ್ ಕೂಡ ಹೋಗುತ್ತಿದ್ದೇವೆ. ನಮ್ಮಿಬ್ಬರ ಜೊತೆಗಿನ ಆತ್ಮೀಯತೆಗೆ ಹೆಚ್ಚು ರೆಕ್ಕೆಪುಕ್ಕ ಹಚ್ಚಬೇಡಿ ಮಧ್ಯಮದೆದುರು ವಿನಂತಿಸಿಕೊಂಡರು.

ಬಾಲಿವುಡ್'ನಲ್ಲಿಇತ್ತೀಚಿನ ವಿವಿಧ ಪಾತ್ರಗಳ ಮೂಲಕ ಖ್ಯಾತಿಗಳಿಸುತ್ತಿರುವ ಆಲಿಯಾ ಉಡ್ತಾ ಪಂಜಾಬ್'ನ ಅದ್ಭುತ ಪಾತ್ರಕ್ಕಾಗಿ ಅತ್ಯುತ್ತಮ ನಟಿಯಾಗಿ ಫಿಲ್ಮ ಫೇರ್  ಪ್ರಶಸ್ತಿಗೆ ಭಾಜನರಾಗಿದ್ದರು. ಬ್ರಹ್ಮಾಸ್ತ್ರ ಚಿತ್ರದಲ್ಲಿಯೂ ಇಬ್ಬರು ಪ್ರೇಮಿಗಳು ಒಟ್ಟಾಗಿ ಅಭಿನಯಿಸುತ್ತಿದ್ದಾರೆ. ಆಲಿಯಾ- ರಣಬೀರ್ ಪ್ರೇಮ ಮುಂದುವರೆದು ದಾಂಪತ್ಯದವರೆಗೂ ಕಾಲಿಡುತ್ತದೆಯೋ ಅಥವಾ ಇಬ್ಬರು ಒಂದಷ್ಟು ದಿನ ಓಡಾಡಿ ಸ್ವತಃ ಗುಡ್ಬೈ ಹೇಳುತ್ತಾರೋ ಕಾಲವೇ ಉತ್ತರ ಹೇಳಲಿದೆ.

loader