[ ಸುಳ್ ಸುದ್ದಿ ] ಜೈಲಿನ ದೃಶ್ಯ ಪಡೆದು ಸಲ್ಮಾನ್ ಸಿನಿಮಾ ಮಾಡಿದ ರಾಂ ಗೋಪಾಲ್ ವರ್ಮಾ

Ram Gopal Verma Make Movie About Salman Khan
Highlights

ನೈಜ ಘಟನೆ ಆಧರಿಸಿದ ಚಿತ್ರಗಳನ್ನು ಮಾಡುವುದರಲ್ಲಿ ಖ್ಯಾತಿ ಪಡೆದಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದೀಗ ಒಂದೇ ದಿನದಲ್ಲಿ ಸಲ್ಮಾನ್ ಖಾನ್ ಚಿತ್ರವನ್ನು ನಿರ್ಮಿಸಿದ್ದಾರೆ.

ಮುಂಬೈ : ನೈಜ ಘಟನೆ ಆಧರಿಸಿದ ಚಿತ್ರಗಳನ್ನು ಮಾಡುವುದರಲ್ಲಿ ಖ್ಯಾತಿ ಪಡೆದಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದೀಗ ಒಂದೇ ದಿನದಲ್ಲಿ ಸಲ್ಮಾನ್ ಖಾನ್ ಚಿತ್ರವನ್ನು ನಿರ್ಮಿಸಿದ್ದಾರೆ.

ಜೋಧ್‌ಪುರ ಜೈಲಿನಲ್ಲಿ ಸಲ್ಮಾನ್ ಖಾನ್ ರಾತ್ರಿಯನ್ನು ಕಳೆದ ಸಿಸಿ ಟೀವಿ ದೃಶ್ಯಾವಳಿಗಳನ್ನು ರಾಮ್ ಗೋಪಾಲ್ ರಹಸ್ಯವಾಗಿ ಪಡೆದುಕೊಂಡಿದ್ದಾರೆ. ಅದನ್ನು ಎಡಿಟ್ ಮಾಡಿ 2 ತಾಸಿನ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಚಿತ್ರಕ್ಕೆ ಸಲ್ಮಾನ್ ನೈಟ್ಸ್ ಎಂದು ಟೈಟಲ್ ನೀಡಲಾಗಿದ್ದು, ಒಂದೆರಡು ದಿನಗಳಲ್ಲೇ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ಆಸಾರಾಮ್ ಬಾಪು ಅವರ ವಿಡಿಯೋ ದೃಶ್ಯಾವಳಿಗಳನ್ನು ಧಾರಾವಾಹಿ ಮಾಡಲು ರಾಮ್ ಗೋಪಾಲ್ ವರ್ಮಾ ನಿರ್ಧರಿಸಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

loader