ಹಾಗಂತ ಹೇಳಿ ರಕ್ಷಿತ್ ಶೆಟ್ಟಿ ನಿಟ್ಟುಸಿರಿಟ್ಟರು. ಮದುವೆಯ ಆಲೋಚನೆ ನಮಗಿನ್ನೂ ಬಂದೇ ಇಲ್ಲ. ಆ ಬಗ್ಗೆ ಮನೆಯಲ್ಲೂ ಮಾತುಕತೆ ಆಗಿಲ್ಲ.
ಹಾಗಂತ ಹೇಳಿ ರಕ್ಷಿತ್ ಶೆಟ್ಟಿ ನಿಟ್ಟುಸಿರಿಟ್ಟರು. ಮದುವೆಯ ಆಲೋಚನೆ ನಮಗಿನ್ನೂ ಬಂದೇ ಇಲ್ಲ. ಆ ಬಗ್ಗೆ ಮನೆಯಲ್ಲೂ ಮಾತುಕತೆ ಆಗಿಲ್ಲ. ಮದುವೆ ಅಂದ್ರೆ ತಮಾಷೆಯಲ್ಲ, ಅದಕ್ಕೆ ಅದರದ್ದೇ ಆದ ಕ್ರಮಬದ್ಧ ಸಂಪ್ರದಾಯ ಇದೆ. ಅದೆಲ್ಲವೂ ಆಗಬೇಕು. ಅದಿನ್ನೂ ತುಂಬಾ ನಿಧಾನ.
ಹಾಗಿದ್ದರೆ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಬಂದದ್ದಾದರೂ ಹೇಗೆ?
ನನಗೂ ಗೊತ್ತಿಲ್ಲ. ಈ ಬಗ್ಗೆ ನಾವಂತೂ ಯಾರಲ್ಲೂ ಹೇಳಿಕೊಂಡಿಲ್ಲ. ನನ್ನ ಹತ್ತಿರದ ಮಿತ್ರರಿಗೂ ಗೊತ್ತಿಲ್ಲ. ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ, ರಶ್ಮಿಕಾ ಮನೆಯವರು ಮತ್ಯಾರದೋ ಜೊತೆ ಪ್ರಸ್ತಾಪ ಮಾಡಿದ್ದರಂತೆ. ನಮ್ಮನೇಲಿ ಇನ್ನೂ ಆ ಕುರಿತು ಮಾತುಕತೆ ಆಗಿಲ್ಲ.
ಅಂದ್ರೆ ಪ್ರೀತಿಸ್ತಿರೋದು ನಿಜ?
ನಮಗೆ ಪರಸ್ಪರರನ್ನು ಕಂಡರೆ ಇಷ್ಟ ಅನ್ನೋದು ಸುಳ್ಳಲ್ಲ. ಆದರೆ ಅದಕ್ಕಿಂತ ಹೆಚ್ಚಿನದೇನೂ ಇಲ್ಲ. ಒಂದಂತೂ ಸತ್ಯ ಎರಡು ವರ್ಷ ಮದುವೆ ಆಗೋ ಆಲೋಚನೆ ಇಬ್ಬರಿಗೂ ಇಲ್ಲ. ಮಾಡಬೇಕಾದ ಸಿನಿಮಾಗಳು ಬೇಕಾದಷ್ಟಿವೆ. ಸಾಧಿಸಬೇಕಾದದ್ದು ತುಂಬ ಉಳಿದಿದೆ. ಅವನೇ ಶ್ರೀಮನ್ನಾರಾಯಣ ಮುಗಿಯುತ್ತಿದ್ದಂತೆ ಥಗ್ಸ್ ಆಫ್ ಮಾಲ್ಗುಡಿ ಕೈಗೆತ್ತಿಕೊಳ್ಳಬೇಕಾಗಿದೆ. ಅದರ ಸ್ಕ್ರಿಪ್ಟ್ ಮುಗಿಸೋದಿದೆ. ಹೀಗೆ ಪುರುಸೊತ್ತಿಲ್ಲದಷ್ಟು ಕೆಲಸ ಕೈಯಲ್ಲಿದೆ. ಮಿಕ್ಕಿದ್ದೆಲ್ಲ ಆಮೇಲೆ!
(ಕನ್ನಡಪ್ರಭ ವಾರ್ತೆ)
