ಉಳಿದವರು ಕಂಡಂತೆ ಸಿನಿಮಾವನ್ನ ನಿರ್ದೇಶನ ಮಾಡಿದ್ದ ರಕ್ಷಿತ್ ಶೆಟ್ಟಿ ಈಗ ಎರಡನೇ ಬಾರಿಗೆ ಆಕ್ಷನ್ ಕಟ್ ಹೇಳೋದಿಕ್ಕೆ ರೆಡಿಯಾಗಿದ್ದಾರೆ...

ಕಿಚ್ಚ ಸುದೀಪ್ ಸಿನಿಮಾಕ್ಕೆ ನಟ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡ್ತಾರೆ ಅಂತಾ ಗಾಂಧಿನಗರದಲ್ಲಿ ನ್ಯೂಸ್ ಆಗಿತ್ತು.ಸದ್ಯದ ಲೇಟೆಸ್ಟ್ ನ್ಯೂಸ್ ಪ್ರಕಾರ ಸುದೀಪ್ ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ಉಳಿದವರು ಕಂಡಂತೆ ಸಿನಿಮಾವನ್ನ ನಿರ್ದೇಶನ ಮಾಡಿದ್ದ ರಕ್ಷಿತ್ ಶೆಟ್ಟಿ ಈಗ ಎರಡನೇ ಬಾರಿಗೆ ಆಕ್ಷನ್ ಕಟ್ ಹೇಳೋದಿಕ್ಕೆ ರೆಡಿಯಾಗಿದ್ದಾರೆ...ಚಿತ್ರಕ್ಕೆ ಥಗ್ಸ್ ಆಫ್ ಮಾಲ್ಗುಡಿ ಎಂಬ ಟೈಟಲ್ ಇಡಲಾಗಿದೆ..ಸುದೀಪ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ‘ಹೆಬ್ಬುಲಿ’ಯಲ್ಲಿ ಬ್ಯುಸಿಯಾಗಿರುವ ಸುದೀಪ್, ನಂತರದಲ್ಲಿ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದು, ಅದಾದ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.