ಇದು ಭಾಷೆ ವಿಚಾರ, ತುಂಬಾ ಸೂಕ್ಷ್ಮ ವಿಚಾರ. ಕರ್ನಾಟಕದಲ್ಲಿ ಕಾಲ ರಿಲೀಸ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ವಿರೋಧದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 'ಕಾಲಾ'ಚಿತ್ರ ಬಿಡುಗಡೆ ಇಲ್ಲ. ರಜನಿಕಾಂತ್ ಕ್ಷಮೆ ಕೇಳಿದರೂ 'ಕಾಲ' ಚಿತ್ರ ಬಿಡುಗಡೆಗೆ ಅವಕಾಶ ಇಲ್ಲ.
ಬೆಂಗಳೂರು(ಮೇ.29): ರಜನಿಕಾಂತ್ ಅಭಿನಯದ ಕರಿಕಾಲನ್ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಮ್ಮಿಕೊಂಡಿದ ಸಭೆಯಲ್ಲಿ ಚಿತ್ರ ವಿತರಕರು, ಪ್ರದರ್ಶಕರು ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದ್ ತಿಳಿಸಿದ್ದಾರೆ.
ಕಾವೇರಿ ವಿಷಯದಲ್ಲಿ ರಾಜ್ಯದ ವಿರುದ್ಧ ರಜಿನಿಕಾಂತ್ ಮಾತನಾಡಿದ್ದು ಈ ಹಿನ್ನಲೆಯಲ್ಲಿ ನಿಷೇಧಿಸಲಾಗಿದೆ. ಇದು ಭಾಷೆ ವಿಚಾರ, ತುಂಬಾ ಸೂಕ್ಷ್ಮ ವಿಚಾರ. ಕರ್ನಾಟಕದಲ್ಲಿ ಕಾಲ ರಿಲೀಸ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ವಿರೋಧದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 'ಕಾಲಾ'ಚಿತ್ರ ಬಿಡುಗಡೆ ಇಲ್ಲ. ರಜನಿಕಾಂತ್ ಕ್ಷಮೆ ಕೇಳಿದರೂ 'ಕಾಲ' ಚಿತ್ರ ಬಿಡುಗಡೆಗೆ ಅವಕಾಶ ಇಲ್ಲ. ನೆಲ, ಜಲದ ವಿಷಯದಲ್ಲಿ ಕನ್ನಡ ಚಿತ್ರರಂಗ ಒಗ್ಗಟ್ಟಾಗಿದೆ ಎಂದು ಅವರು ಹೇಳಿದರು. ಜೂನ್ 7 ರಂದು ವಿಶ್ವದಾದ್ಯಂತ 'ಕಾಲ' ಬಿಡುಗಡೆಯಾಗಲಿದೆ.
