Asianet Suvarna News Asianet Suvarna News

ಬಳ್ಳಾರಿಯಲ್ಲಿ ಪತ್ನಿಯೊಂದಿಗೆ ಬಾಹುಬಲಿ-2 ವೀಕ್ಷಿಸಿದ ರಾಜಮೌಳಿ

ನಗರದ ರಾಧಿಕಾ ಚಿತ್ರಮಂದಿರದ ಮಾಲೀಕ ಹಾಗೂ ತೆಲುಗಿನ ಈಗ ಚಿತ್ರದ ನಿರ್ಮಾಪಕರ ಸ್ನೇಹಿತ  ಪರ್'ಪಾಟಿ ಸಾಯಿ ಕುಟುಂಬದ ಕಾರ್ಯಕ್ರಮಕ್ಕೆ ಪತ್ನಿ ಜೊತೆ ಆಗಮಿಸಿದ್ದ ಅವರು, ಪ್ರೇಕ್ಷಕರ ಜೊತೆ ಬಾಹುಬಲಿ-2 ಸಿನಿಮಾ ವೀಕ್ಷಿಸಿದರು.

Rajamouli watch Bahubali at ballary
  • Facebook
  • Twitter
  • Whatsapp

ಬಳ್ಳಾರಿ(ಮೇ.13): ದೇಶಾದ್ಯಂತ ಬಾಹುಬಲಿ ಯಶಸ್ಸಿಗೆ ನಮ್ಮ ತಂದೆಯ ಸ್ಕ್ರೀಪ್ಟ್, ಚಿತ್ರತಂಡ, ಚಿತ್ರಕ್ಕೆ ಜೀವತುಂಬಿದ  ಪಾತ್ರಗಳು ಹಾಗೂ ಬಾಹುಬಲಿ ದೇಶಾದ್ಯಂತ ಪ್ರೇಕ್ಷಕರೆ ಕಾರಣ ಎಂದು ನಿರ್ದೇಶಕ ರಾಜಮೌಳಿ ತಿಳಿಸಿದ್ದಾರೆ.

ನಗರದ ರಾಧಿಕಾ ಚಿತ್ರಮಂದಿರದ ಮಾಲೀಕ ಹಾಗೂ ತೆಲುಗಿನ ಈಗ ಚಿತ್ರದ ನಿರ್ಮಾಪಕರ ಸ್ನೇಹಿತ  ಪರ್'ಪಾಟಿ ಸಾಯಿ ಕುಟುಂಬದ ಕಾರ್ಯಕ್ರಮಕ್ಕೆ ಪತ್ನಿ ಜೊತೆ ಆಗಮಿಸಿದ್ದ ಅವರು, ಪ್ರೇಕ್ಷಕರ ಜೊತೆ ಬಾಹುಬಲಿ-2 ಸಿನಿಮಾ ವೀಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಹುಬಲಿ ನಿರೀಕ್ಷೆಗೂ ಮೀರಿ ಯಶಸ್ಸು ತಂದಿದೆ ದೇಶಾದ್ಯಂತ ಒಳ್ಳೆ ಹೆಸರು ಮಾಡಿದೆ. ನಾನು ಚಿತ್ರಪ್ರೇಮಿಗಳಿಗೆ ಚಿರರುಣಿ, ಅವರು ಅತೀವ ಪ್ರೀತಿ ವಿಶ್ವಾಸ ತೋರಿಸಿದ್ದಾರೆ.

ಕರ್ನಾಟಕದಲ್ಲಿ ಡಬ್ಬಿಂಗ್ ವಿರೋಧವಿದೆ, ಅನುಮತಿ ಇದ್ದರೆ ಒಳ್ಳೆಯದಿತ್ತು ಅದು ವಾಣಿಜ್ಯ ಮಂಡಳಿಗೆ ಬಿಟ್ಟ ತಿರ್ಮಾನ. ಇನ್ನೂ ಪೈರಸಿ ತಡೆಯುವಲ್ಲಿ ಕಠಿಣ ಕಾನೂನು ತುಂಬಾ ಅವಶ್ಯಕತೆಯಿದೆ. ಸದ್ಯ ನಾನು ಯಾವುದೆ ಹೊಸ ಚಿತ್ರದ ಪ್ರಾಜೆಕ್ಟ್  ಕೈಗೆತ್ತಿಕೊಂಡಿಲ್ಲ, ಬಾಹುಬಲಿ ಯಶಸ್ಸಿನ ಸಂತೋಷದಲ್ಲಿದ್ದೀನಿ ಎಂದಿದ್ದಾರೆ.

Follow Us:
Download App:
  • android
  • ios