ನಿರ್ದೇಶಕ ರಾಜಮೌಳಿ ಹಾಗೂ ಕತೆಗಾರ ವಿಜಯೇಂದ್ರ ಪ್ರಸಾದ್‌ ಅವರನ್ನು ಹೊಸ​ದಾಗಿ ಪರಿಚಯಿಸಬೇಕಿಲ್ಲ. ‘ಬಾಹುಬಲಿ' ಖ್ಯಾತಿಯ ಎಸ್‌ಎಸ್‌ ರಾಜಮೌಳಿಯ ಅಷ್ಟೂಯಶಸ್ವೀ ಚಿತ್ರಗಳ ಕತೆಗಾರ ಅವರ ತಂದೆ ವಿಜಯೇಂದ್ರ ಪ್ರಸಾದ್‌. ಇಲ್ಲಿ ಬೇರೆ ವಿಷಯವನ್ನೇ ಹೇಳಬೇಕು. ವಿಜಯೇಂದ್ರ ಪ್ರಸಾದ್‌ ಅವರು ಒಂದು ಚಿತ್ರ ನಿರ್ದೇಶಿಸುತ್ತಿದ್ದಾರೆ, ಅದೂ ಕನ್ನಡದಲ್ಲಿ. ಆ ಚಿತ್ರಕ್ಕೆ ರಾಜಮೌಳಿ ವಾಯ್ಸ್ ಓವರ್‌ ಕೊಟ್ಟಿದ್ದಾರೆ. ಆ ಚಿತ್ರದ ಹೆಸರು: ‘ಶ್ರೀವಲ್ಲಿ'. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸೆಟ್ಟೇರಿ ಚಿತ್ರೀ​ಕರಣ ಮುಗಿಸಿ, ಇತ್ತೀಚೆಗಷ್ಟೇ ಆಡಿಯೋ ಬಿಡುಗಡೆ ನಡೆದಿದೆ, ಸದ್ಯದಲ್ಲೇ ತೆರೆ ಕಾಣಲಿದೆ.

ತಮ್ಮ ತಂದೆಯ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಚಿತ್ರಕ್ಕೆ ಹಿನ್ನೆಲೆ ಧ್ವನಿ ಕೊಡುವುದಕ್ಕೆ ರಾಜಮೌಳಿ ಮುಂದಾಗಿದ್ದಾರೆ. ಅಂದರೆ ಚಿತ್ರದಲ್ಲಿ ನಟಿಸಿರುವ ಎಲ್ಲ ಮುಖ್ಯ ಪಾತ್ರದಾರಿಗಳನ್ನು ತೆರೆ ಮೇಲೆ ಹಿನ್ನೆಲೆ ಧ್ವನಿ ಮೂಲಕ ಪರಿಚಯಿ­ ಸುವ ಕೆಲಸವನ್ನು ರಾಜಮೌಳಿ ಮಾಡುತ್ತಿದ್ದಾರೆ. ವಿಶೇಷ ಅಂದರೆ ಕನ್ನಡ ಹಾಗೂ ತೆಲುಗು- ಎರಡೂ ಭಾಷೆಯಲ್ಲೂ ರಾಜ್‌ಮೌಳಿ ಯದ್ದೇ ಧ್ವನಿ ಇರುತ್ತದೆ.