ಕರಣ್ ಬಾಲಿವುಡ್ ಸೇರಿದಂತೆ ಯಾವುದೇ ಭಾಷೆಯ ನಾಯಕನಟನನ್ನು ಸ್ಟಾರ್ ಎಂದು ಹೊಗಳಿಲ್ಲ.

ಮುಂಬೈ(ಮೇ.28): ಬಾಲಿವುಡ್'ನ ಸ್ಟಾರ್ ಡೈರಕ್ಟ'ರ್ ಪ್ರಕಾರ ದೇಶದ ಅತೀ ದೊಡ್ಡ ಸ್ಟಾರ್ ಸೂಪರ್'ಸ್ಟಾರ್ ಯಾರು ಗೊತ್ತೆ ? ಕೇಳಿದ್ರೆ ನಿಮಗೂ ಸ್ವಲ್ಪ ಆಶ್ಚರ್ಯವಾಗುತ್ತದೆ. ಕರಣ್ ಬಾಲಿವುಡ್ ಸೇರಿದಂತೆ ಯಾವುದೇ ಭಾಷೆಯ ನಾಯಕನಟನನ್ನು ಸ್ಟಾರ್ ಎಂದು ಹೊಗಳಿಲ್ಲ. ಅವರು ದೊಡ್ಡ ಸೂಪರ್ ಸ್ಟಾರ್ ಎಂದು ಮೊದಲಿಸಿರುವುದು ಬಾಹುಬಲಿ ಸರಣಿ ಚಿತ್ರಗಳ ನಿರ್ದೇಶಕ ಎಸ್.ಎಸ್. ರಾಜಮೌಳಿಯವರನ್ನು.

ಬಾಹುಬಲಿ 1 ಮತ್ತು 2 ಚಿತ್ರ ನಿರ್ದೇಶಿಸಿರುವ ಎಸ್.ಎಸ್. ರಾಜಮೌಳಿ ಅವರು ದೇಶದ ಅತೀ ದೊಡ್ಡ ಸೂಪರ್'ಸ್ಟಾರ್. ಚಿತ್ರದ ಬಗ್ಗೆ ಮಾತನಾಡಿದ ಕರಣ್ ಜೋಹರ್ ' ಬಾಹುಬಲಿ-2 ಈಗಾಗಲೇ ವಿಶ್ವದಾದ್ಯಂತ 1500 ಕೋಟಿ ರೂ. ಬಾಚಿದೆ. ಬಾಹುಬಲಿಯ ಬಗ್ಗೆ ಕೆಲವೇ ಮಾತುಗಳಲ್ಲಿ ಹೇಳುವುದಾದರೆ ಇದೊಂದು ಮೈಲಿಗಲ್ಲು ಸಾಧಿಸಿದ ಸಿನಿಮಾ. ಎಸ್.ಎಸ್. ರಾಜಮೌಳಿ ಅವರು ದೇಶದ ಅತೀ ದೊಡ್ಡ ಸೂಪರ್ ಸ್ಟಾರ್ ಆಗಿದ್ದಾರೆ.

ಇಂತಹ ಒಂದು ಸಿನಿಮಾ ನಿರ್ದೇಶಿಸಿದ್ದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ'. ನಾನು ಮತ್ತು ನನ್ನ ನಿರ್ಮಾಣ ತಂಡ ಸಿನಿಮಾದ ಯಶಸ್ಸಿನ ಭಾಗವಾಗಿದ್ದಕ್ಕೆ ನನಗೆ ನಿಜಕ್ಕೂ ಹೆಮ್ಮೆಯಿದೆ' ಎಂದು ತಿಳಿಸಿದ್ದಾರೆ.ಕರಣ್ ಜೋಹರ್ ಅವರು ಬಾಹುಬಲಿ-2 ಚಿತ್ರದ ಹಿಂದಿ ಅವತರಣಿಕೆಯನ್ನು ಕೊಂಡುಕೊಂಡಿದ್ದರು. ಹಿಂದಿಯಲ್ಲಿಯೇ ಈ ಚಿತ್ರ 478 ಕೋಟಿ ರೂ. ಗಳಿಸಿದೆ.