Asianet Suvarna News Asianet Suvarna News

(ವಿಡಿಯೋ)ಬಾಹುಬಲಿಯಲ್ಲಿ ನಟಿಸಿದ್ದಾರೆ ರಾಜಮೌಳಿ!, ಗುರುತಿಸಲು ಎಡವಿದ್ದೀರಾ? ಇಲ್ಲಿದೆ ಆ ದೃಶ್ಯಗಳು

ಬಾಲಿವುಡ್'ನಲ್ಲಿ ತಾವೂ ಸಿನಿಮಾದಲ್ಲಿ ನಟಿಸಬೇಕೆಂದು ಕನಸು ಕಂಡ ನಿರ್ದೇಶಕರು ಹಲವರಿದ್ದಾರೆ. ಆದರೂ ನಿರ್ದೇಶಕರಾಗಿ ಪ್ರಖ್ಯಾತಿ ಪಡೆದ ಅವರು ತಮ್ಮದೇ ಸಿನಿಮಾದಲ್ಲಿ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡು ತಮ್ಮ ಕನಸು ನನಸಾಗಿಸಿದ್ದಾರೆ. ಆದರೆ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಈವರೆಗಿನ ಯಶಸ್ವೀ ಸಿನಿಮಾ ನೀಡಿದ ನಿರ್ದೇಶಕ ಎಸ್ ಎಸ್ ರಾಜಮೌಳಿ ಕೂಡಾ ಬಾಹುಬಲಿಯಲ್ಲಿ ನಟಿಸಿದ್ದಾರೆ ಎಂದು ನಿಮಗೆ ತಿಳಿದಿದೆಯೇ?. ಹೌದು, ಬಾಕ್ಸಾಫೀಸ್ ಕೊಳ್ಳೆ ಹೊಡೆದ ಬಾಹುಬಲಿ ಸಿನಿಮಾದಲ್ಲಿ ನಿರ್ದೇಶಕ ರಾಜಮೌಳಿ ಕೂಡಾ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಯಾವ ಪಾತ್ರ ಮಾಡಿದ್ದಾರೆ? ಅಂತ ಯೋಚಿಸುತ್ತಿದ್ದೀರಾ ಹಾಗಾದ್ರೆ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

Rajamouli acted in bahubali
  • Facebook
  • Twitter
  • Whatsapp

ನವದೆಹಲಿ(ಮೇ.13): ಬಾಲಿವುಡ್'ನಲ್ಲಿ ತಾವೂ ಸಿನಿಮಾದಲ್ಲಿ ನಟಿಸಬೇಕೆಂದು ಕನಸು ಕಂಡ ನಿರ್ದೇಶಕರು ಹಲವರಿದ್ದಾರೆ. ಆದರೂ ನಿರ್ದೇಶಕರಾಗಿ ಪ್ರಖ್ಯಾತಿ ಪಡೆದ ಅವರು ತಮ್ಮದೇ ಸಿನಿಮಾದಲ್ಲಿ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡು ತಮ್ಮ ಕನಸು ನನಸಾಗಿಸಿದ್ದಾರೆ. ಆದರೆ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಈವರೆಗಿನ ಯಶಸ್ವೀ ಸಿನಿಮಾ ನೀಡಿದ ನಿರ್ದೇಶಕ ಎಸ್ ಎಸ್ ರಾಜಮೌಳಿ ಕೂಡಾ ಬಾಹುಬಲಿಯಲ್ಲಿ ನಟಿಸಿದ್ದಾರೆ ಎಂದು ನಿಮಗೆ ತಿಳಿದಿದೆಯೇ?. ಹೌದು, ಬಾಕ್ಸಾಫೀಸ್ ಕೊಳ್ಳೆ ಹೊಡೆದ ಬಾಹುಬಲಿ ಸಿನಿಮಾದಲ್ಲಿ ನಿರ್ದೇಶಕ ರಾಜಮೌಳಿ ಕೂಡಾ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಯಾವ ಪಾತ್ರ ಮಾಡಿದ್ದಾರೆ? ಅಂತ ಯೋಚಿಸುತ್ತಿದ್ದೀರಾ ಹಾಗಾದ್ರೆ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

ವಾಸ್ತವವಾಗಿ ನಿರ್ದೇಶಕ ರಾಜಮೌಳಿ ನಟಿಸಿದ್ದು 2015ರಲ್ಲಿ ತೆರೆಕಂಡ 'ಬಾಹುಬಲಿ: ದ ಬಿಗಿನಿಂಗ್' ಸಿನಿಮಾದಲ್ಲಿ. ಈ ಸಿನಿಮಾದ ಒಂದು ದೃಶ್ಯದಲ್ಲಿ ಅಮರೇಂದ್ರ ಬಾಹುಬಲಿ ಹಾಗೂ ಬಲ್ಲಾಳದೇವ ಇಬ್ಬರೂ ಒಂದು ಶರಾಬು ಅಂಗಡಿಯಲ್ಲಿರುವುದನ್ನು ತೋರಿಸಿದ್ದಾರೆ. ಈ ಸೀನ್'ನಲ್ಲಿ ಶರಾಬು ಮಾರುವ ವ್ಯಕ್ತಿಯೊಬ್ಬನನ್ನು ತೋರಿಸಲಾಗಿದೆ. ಈ ಪುಟ್ಟ ಸೀನ್'ನಲ್ಲಿ ಶರಾಬು ಮಾರುವ ಪಾತ್ರದಲ್ಲಿ ಖುದ್ದು ರಾಜಮೌಳಿ ನಟಿಸಿದ್ದಾರೆ. ಇನ್ನೂ ಅನುಮಾನವಿದ್ದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ನೋಡಿ ನಿಮ್ಮ ಅನುಮಾನ ಬಗೆಹರಿಸಿಕೊಳ್ಳಿ

 

 

 

 

 

 

 

 

 

 

 

ನಿರ್ದೇಶಕರಲ್ಲಿ ಕೇವಲ ರಾಜಮೌಳಿ ಮಾತ್ರವಲ್ಲದೇ ಹಿಂದಿ ಸಿನಿಮಾಗಳ ಹಲವಾರು ನಿರ್ದೇಶಕರು ಹೀಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಉದಾಹರಣೆಗೆ ಸುಭಾಷ್ ಗಾಯ್ ತಾನ್ನ ನಿರ್ದೇಶನದ ಪ್ರತಿಯೊಂದು ಸಿನಿಮಾದಲ್ಲೂ ಯಾವುದಾದರೊಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ ಫರಾ ಖಾನ್ ಕೂಡಾ ತನ್ನ ನಿರ್ದೇಶನದ 'ಓಂ ಶಾಂತಿ ಓಂ' ಸಿನಿಮಾದಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಪ್ರಕಾಶ್ ಜಾ ಕೂಡಾ ಇದರಿಂದ ಹೊರತಾಗಿಲ್ಲ.

ಬಾಹುಬಲಿ ಸಿನಿಮಾದ ಯಶಸ್ಸು ನಿರ್ದೇಶಕ ರಾಜಮೌಳಿಯ ಹೆಸರನ್ನು ಎಲ್ಲರಿಗೂ ಪರಿಚಯಿಸಿದೆ. ಇವರು ಅದೆಷ್ಟು ಪ್ರಸಿದ್ಧರಾಗಿದ್ದಾರೆಂದರೆ ಇದೀಗ ಪ್ರತಿಯೊಬ್ಬರೂ ಇವರ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ತಾನೇ ಒಂದು ಪಾತ್ರ ನಿಭಾಯಿಸಿ ತಾನೂ ಒಬ್ಬ ನಟ ಎಂಬುವುದನ್ನು ರಾಜಮೌಳಿ ಸಾಬೀತುಪಡಿಸಿದ್ದಾರೆ.   

Follow Us:
Download App:
  • android
  • ios