ಬೆಂಗಳೂರು (ಜು. 31): ರಾಗಿಣಿ ಭಯೋತ್ಪಾದಕಿ ಪಾತ್ರ ಮಾಡುತ್ತಾರೆ ಅನ್ನೋದು ರಾಗಿಣಿ ಹಳೇ ಸುದ್ದಿ. ಆ ಅವತಾರದಲ್ಲಿ ಅವರು ಹೇಗೆ ಕಾಣಿಸುತ್ತಾರೆ. ಅನ್ನುವ ಕುತೂಹಲ ನಿಮಗಿದ್ದರೆ ಈ ಫೋಟೋ ನೋಡಿ. ಪಿ. ಸಿ. ಶೇಖರ್ ನಿರ್ದೇಶನದ ಟೆರರಿಸ್ಟ್ ಚಿತ್ರದ ಫಸ್ಟ್ ಲುಕ್ ಇದು. 

ಚಿತ್ರದಲ್ಲಿ ರಾಗಿಣಿ ಪಾತ್ರದ ಹೆಸರು ರೇಷ್ಮಾ. ಬಾಂಬ್ ಬ್ಲಾಸ್ಟ್ ಆದಾಗ ನಡೆಯುವ ಘಟನಾವಳಿಗಳ ಸುತ್ತ ಕಥೆ ಹೆಣೆಯಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಸನ್ನಿವೇಶಗಳೇ ಚಿತ್ರದ ಕತೆ. ರಾಗಿಣಿ ಇಲ್ಲಿ ಜಾಸ್ತಿ ಮಾತನಾಡಲ್ಲ’ ಎಂಬುದು ನಿರ್ದೇಶಕರ ಮಾತು. ಅಲಂಕಾರ ಸಂತಾನ ಅವರು ಇನ್‌ವೆಂಚರ್ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುರಳಿ ಕ್ರಿಶ್ ಕ್ಯಾಮೆರಾ, ಪ್ರದೀಪ್ ವರ್ಮಾ ಸಂಗೀತ ಸಂಯೋಜನೆ ಹಾಗೂ ಸಚಿನ್ ಸಂಭಾಷಣೆ ಈ ಚಿತ್ರಕ್ಕಿದೆ.