Asianet Suvarna News Asianet Suvarna News

ರಾಧಿಕಾ ಕುಮಾರಸ್ವಾಮಿ ಈಗ ರಿಯಾಲಿಟಿ ಶೋ ಜಡ್ಜ್

. ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ರಾಧಿಕಾ ಕುಮಾರಸ್ವಾಮಿ ಅದರ ಪೂರ್ವಬಾವಿ ತಯಾರಿಯಲ್ಲಿದ್ದಾರೆ. ಶ್ವೇತಾ ಚಂಗಪ್ಪ ಅವರು ಶೋನ ನಿರೂಪಕರಾಗಿರುತ್ತಾರೆ. 

Radhika Kumaraswamy now reality show judge
  • Facebook
  • Twitter
  • Whatsapp

ನಟಿ ರಾಧಿಕಾ ಕುಮಾರಸ್ವಾಮಿ ಕಿರುತೆರೆಗೆ ಎಂಟ್ರಿಯಾಗುತ್ತಿದ್ದಾರೆ. ಅದೂ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ. ಹೌದು, ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮುಂದಿನ ತಿಂಗಳಿನಿಂದ ಪ್ರಸಾರವಾಗಲಿರುವ ‘ಡ್ಯಾನ್ಸ್‌ ಡ್ಯಾನ್ಸ್‌ ಜ್ಯೂನಿಯರ್ಸ್‌' ರಿಯಾಲಿಟಿ ಶೋನಲ್ಲಿ ರಾಧಿಕಾ ಕುಮಾರಸ್ವಾಮಿ ತೀರ್ಪಗಾರರಲ್ಲೊಬ್ಬರು. ಇವರ ಜತೆಗೆ ‘ನೆನಪಿರಲಿ' ಪ್ರೇಮ್‌, ಬಾಲಿವುಡ್‌ ಕೊರಿಯೋಗ್ರಾಫರ್‌ ಸಲ್ಮಾನ್‌ ಕೂಡ ತೀರ್ಪುಗಾರ ರಾಗಿ ರುತ್ತಾರೆ. ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ರಾಧಿಕಾ ಕುಮಾರಸ್ವಾಮಿ ಅದರ ಪೂರ್ವಬಾವಿ ತಯಾರಿಯಲ್ಲಿದ್ದಾರೆ. ಶ್ವೇತಾ ಚಂಗಪ್ಪ ಅವರು ಶೋನ ನಿರೂಪಕರಾಗಿರುತ್ತಾರೆ. 
ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಆಡಿಷನ್‌ ನಡೆಯಲಾಗಿದ್ದು ಜೂನ್‌ ತಿಂಗಳ ಎರಡನೇ ವಾರದಿಂದ ಪ್ರತಿ ಶನಿವಾರ ಹಾಗೂ ಭಾನುವಾರ ‘ಡ್ಯಾನ್ಸ್‌ ಡ್ಯಾನ್ಸ್‌ ಜ್ಯೂನಿಯರ್ಸ್‌' ಶೋ ಪ್ರಸಾರವಾಗಲಿದೆ. ಹಿಂದಿಯಲ್ಲಿ ಸೂಪರ್‌ ಡ್ಯಾನ್ಸರ್ಸ್‌ ಹಾಗೂ ಕಪಿಲ್‌ ಶರ್ಮಾ ಅವರ ಶೋ ಅನ್ನು ನಿರ್ಮಾಣ ಮಾಡುತ್ತಿರುವ ಸಂಸ್ಥೆಯೇ ಈ ‘ಡ್ಯಾನ್ಸ್‌' ಶೋವನ್ನೂ ನಿರ್ಮಿಸುತ್ತಿದೆ. ರಾಧಿಕಾ ಕುಮಾರಸ್ವಾಮಿ ಮತ್ತು ಪ್ರೇಮ್‌- ಇಬ್ಬರಿಗೂ ಇದೇ ಮೊದಲ ರಿಯಾಲಿಟಿ ಶೋ ಅನುಭವ

(ಕ್ನಡಪ್ರಭ ವಾರ್ತೆ)

Follow Us:
Download App:
  • android
  • ios