'ನನ್ನ ಫಿಟ್ನೆಸ್ ನಂದು, ನಿಮ್ಮದಲ್ಲ': ಡೈಸಿ ಶಾ ಚಾಲೆಂಜ್ ಏನು?

First Published 29, May 2018, 7:44 PM IST
Race 3' actress Daisy Shah's version of #HumFitTohIndiaFit
Highlights

ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ರಾಠೋಡ್ ಆರಂಭಿಸಿರುವ #‏HumFitTohIndiaFit ಅಭಿಯಾನಕ್ಕೆ ಎಲ್ಲೆಡೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಕ್ರೀಡಾ ಮತ್ತು ಸಿನಿ ಜಗತ್ತಿನ ಪ್ರಮುಖರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಅದರಂತೆ ರೇಸ್-3 ಚಿತ್ರದ ನಾಯಕಿ ಡೈಸಿ ಶಾ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

ಮುಂಬೈ(ಮೇ 29): ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ರಾಠೋಡ್ ಆರಂಭಿಸಿರುವ #‏HumFitTohIndiaFit ಅಭಿಯಾನಕ್ಕೆ ಎಲ್ಲೆಡೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಕ್ರೀಡಾ ಮತ್ತು ಸಿನಿ ಜಗತ್ತಿನ ಪ್ರಮುಖರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಅದರಂತೆ ರೇಸ್-3 ಚಿತ್ರದ ನಾಯಕಿ ಡೈಸಿ ಶಾ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

ರೇಸ್-3 ಚಿತ್ರದ ನಿರ್ದೇಶಕ ರೆಮೋ ಡಿಸೋಜಾ ಅವರು ನೀಡಿದ್ದ ಚಾಲೆಂಜ್ ಸ್ವೀಕರಿಸಿರುವ ಡೈಸಿ, ತಮ್ಮ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ರೆಮೋ ತಮಗೆ ಯಾವುದೇ ಚಾಲೆಂಜ್ ನೀಡಿದರೂ ತಾವು ಅದನ್ನು ಸ್ವೀಕರಿಸಲು ಸಿದ್ದ ಎಂದು ಡೈಸಿ ಟ್ವಿಟ್ ಮಾಡಿದ್ದಾರೆ. ಅಲ್ಲದೇ ಕೇಂದ್ರ ಸಚಿವರ ಅಭಿಯಾನ ನಿಜಕ್ಕೂ ಪ್ರಶಂಸನೀಯ ಎಂದು ಡೈಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇನ್ನು ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿರುವ, ರೆಮೋ ಡಿಸೋಜಾ ನಿರ್ದೇಶನದ ರೇಸ್-3 ಚಿತ್ರ ಇದೇ ಜೂನ್ ೧೫ ರಂದು ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವಲಿನ್ ಫರ್ನಾಂಡೀಸ್ ಸೇರಿದಂತೆ ಹಲವು ನಟ ನಟಿಯರು ಅಭಿನಯಿಸಿದ್ದಾರೆ.

loader