ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋದ ಸೀಸನ್ 12 ಮತ್ತು 3 ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಸೀಸನ್ 1 ಮತ್ತು 2 ಅನ್ನು ಪುನೀತ್ ರಾಜ್‌ಕುಮಾರ್ ನಡೆಸಿಕೊಟ್ಟಿದ್ದರು. ಸೀಸನ್ 2 ಕಾರ್ಯಕ್ರಮವನ್ನು ರಮೇಶ್
ಅರವಿಂದ್ ನಡೆಸಿಕೊಟ್ಟಿದ್ದರು. ಆದರೆ ಕನ್ನಡದ ಕೋಟ್ಯಧಿಪತಿ ಸೀಸನ್ 4 ಪ್ರಸಾರದ ಹಕ್ಕನ್ನು ಕಲರ್ಸ್ ಕನ್ನಡ ಪಡೆದುಕೊಂಡಿದೆ ಎನ್ನಲಾಗಿದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಹಕ್ಕು ಬಿಗ್ ಸಿನರ್ಜಿ ಸಂಸ್ಥೆಯ ಬಳಿಯಲ್ಲಿದೆ.

ಕನ್ನಡದ ಕೋಟ್ಯಧಿಪತಿ ಸೀಸನ್ 4 ಪ್ರಸಾರದ ಹಕ್ಕು ಸದ್ಯ ಸ್ಟಾರ್ ಸುವರ್ಣ ಬಳಿ ಇಲ್ಲ. ಆ ಹಕ್ಕನ್ನು ಕಲರ್ಸ್ ಕನ್ನಡ ಪಡೆದುಕೊಂಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಕಲರ್ಸ್ ಕನ್ನಡ ವಾಹಿನಿಯು ರಿಯಾಲಿಟಿ ಶೋ ನಡೆಸಿಕೊಡಲು ಪುನೀತ್ ರಾಜ್‌ಕುಮಾರ್ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ಪುನೀತ್ ಕಲರ್ಸ್ ವಾಹಿನಿಗೆ ‘ಫ್ಯಾಮಿಲಿ ಪವರ್’ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ವರ್ಷ ಮತ್ತೊಂದು ರಿಯಾಲಿಟಿ ಶೋ ನಡೆಸಿಕೊಡುವುದಂತೂ ನಿಶ್ಚಿತ. ಆ ಕಾರ್ಯಕ್ರಮ ‘ಫ್ಯಾಮಿಲಿ ಪವರ್’ ಆಗುತ್ತದೋ ಅಥವಾ ‘ಕನ್ನಡದ ಕೋಟ್ಯಧಿಪತಿ’ ಸೀಸನ್ 4 ಆಗುತ್ತದೋ ಇನ್ನೂ ನಿಶ್ಚಯವಾಗಿಲ್ಲ.