ಪೊಲೀಸ್ ಸ್ಟೇಷನ್’ಗೆ ಭೇಟಿ ನೀಡಿದ ಪ್ರಿಯಾಂಕ; ಕಾರಣ ಏನು ಗೊತ್ತಾ?

Priyanka Upendra interview with Kannada Prabha
Highlights

ಉಪೇಂದ್ರ ಪ್ರಜಾಕೀಯ ಸ್ಥಾಪನೆ ಮಾಡಿದಾಗ ಅಲ್ಲಿ ಎಲ್ಲರೂ ಖಾಕಿ ತೊಟ್ಟಿದ್ದರು. ಪತ್ನಿ ಪ್ರಿಯಾಂಕ ಉಪೇಂದ್ರ ಕೂಡ ಖಾಕಿ ತೊಟ್ಟು ಪಕ್ಷಕ್ಕೆ ಜೈಕಾರ ಹಾಕಿದ್ದರು. ಇದೆಲ್ಲಾ ಹಳೆಯ ಸಮಾಚಾರ. ಈಗ ‘ಸೆಕೆಂಡ್ ಹಾಫ್’ ಮೂಲಕ ಮತ್ತೆ ಖಾಕಿ ತೊಟ್ಟು ಬರುತ್ತಿದ್ದಾರೆ. ಪಕ್ಷಕ್ಕಾಗಿ ತೊಟ್ಟಿದ್ದು ಪ್ರಾಮಾಣಿಕತೆಯ ಸಂಕೇತವಾದ ಖಾಕಿಯಾದರೆ ಇಲ್ಲಿ ತೊಟ್ಟಿರುವುದು ಖಡಕ್ ಪೊಲೀಸ್ ಖಾಕಿ. ಹೇಳಿ ಕೇಳಿ ಪ್ರಿಯಾಂಕ ಅವರು ತುಂಬಾ ಸಾಫ್ಟ್. 

ಉಪೇಂದ್ರ ಪ್ರಜಾಕೀಯ ಸ್ಥಾಪನೆ ಮಾಡಿದಾಗ ಅಲ್ಲಿ ಎಲ್ಲರೂ ಖಾಕಿ ತೊಟ್ಟಿದ್ದರು. ಪತ್ನಿ ಪ್ರಿಯಾಂಕ ಉಪೇಂದ್ರ ಕೂಡ ಖಾಕಿ ತೊಟ್ಟು ಪಕ್ಷಕ್ಕೆ ಜೈಕಾರ ಹಾಕಿದ್ದರು. ಇದೆಲ್ಲಾ ಹಳೆಯ ಸಮಾಚಾರ. ಈಗ ‘ಸೆಕೆಂಡ್ ಹಾಫ್’ ಮೂಲಕ ಮತ್ತೆ ಖಾಕಿ ತೊಟ್ಟು ಬರುತ್ತಿದ್ದಾರೆ. ಪಕ್ಷಕ್ಕಾಗಿ ತೊಟ್ಟಿದ್ದು ಪ್ರಾಮಾಣಿಕತೆಯ ಸಂಕೇತವಾದ ಖಾಕಿಯಾದರೆ ಇಲ್ಲಿ ತೊಟ್ಟಿರುವುದು ಖಡಕ್ ಪೊಲೀಸ್ ಖಾಕಿ. ಹೇಳಿ ಕೇಳಿ ಪ್ರಿಯಾಂಕ ಅವರು ತುಂಬಾ ಸಾಫ್ಟ್.

ರಫ್ ಅಂಡ್ ಟಫ್ ಪೊಲೀಸ್ ಪಾತ್ರ ಮಾಡಲು ಹೊರಟರೆ ಹೇಗಿರುತ್ತೆ? ಮೊದಲ ಬಾರಿಗೆ ಖಾಕಿ ತೊಟ್ಟು ಹೇಗೆ ಕಾಣಿಸಿಕೊಂಡಿದ್ದಾರೆ ಎಂದು ತಿಳಿಯಬೇಕಾದರೆ ಇಂದು ತೆರೆ ಕಾಣುತ್ತಿರುವ ಯೋಗಿ ದೇವಗಂಗೆ ನಿರ್ದೇಶನ ಮಾಡುತ್ತಿರುವ ‘ಸೆಕೆಂಡ್ ಹಾಫ್’ ಚಿತ್ರ ನೋಡಬೇಕು. ಅದಕ್ಕೂ ಮೊದಲು ಚಿತ್ರದ ತಯಾರಿಯ ಬಗ್ಗೆ ಮಹಿಳಾ ಪೇದೆ ಪಾತ್ರಧಾರಿ ಪ್ರಿಯಾಂಕ ಮಾತನಾಡಿದ್ದಾರೆ.
 

ಮೊದಲು ಚಿತ್ರದ ಟೈಟಲ್‌ನಿಂದಲೇ ಮಾತು ಶುರು ಮಾಡೋಣ
ಹೌದು ಇದೊಂದು ಭಿನ್ನ ಟೈಟಲ್. ಸಾಮಾನ್ಯವಾಗಿ ಚಿತ್ರದಲ್ಲಿ ಫಸ್ಟ್ ಹಾಫ್, ಸೆಕೆಂಡ್ ಹಾಫ್ ಎಂದು ಎರಡು ಭಾಗ ಇರುತ್ತದೆ. ನಮ್ಮ ಚಿತ್ರದಲ್ಲಿ ಎರಡನೇ ಭಾಗದಲ್ಲಿಯೇ ಇಡೀ ಚಿತ್ರ ತನ್ನ ಅಸಲಿ ಕತೆಯನ್ನು ತೆರೆದಿಡುತ್ತದೆ. ಅದಕ್ಕಾಗಿಯೇ ‘ಸೆಕೆಂಡ್ ಹಾಫ್’ ಎಂದು ಟೈಟಲ್ ಇಟ್ಟುಕೊಂಡಿದ್ದಾರೆ ನಿರ್ದೇಶಕರು. ಫಸ್ಟ್ ಹಾಫ್ ಕುತೂಹಲ, ರೋಚಕತೆಯನ್ನು ಹುಟ್ಟಿಸುತ್ತದೆ. ಹಾಗಾಗಿ ಇಲ್ಲಿ ಎರಡೂ ಭಾಗಗಳೂ ಪ್ರೇಕ್ಷಕರನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತವೆ.

ಮೊದಲ ಬಾರಿಗೆ ಖಾಕಿ ತೊಟ್ಟಿದ್ದೀರಿ, ಹೇಗನ್ನಿಸಿತು?
ನನ್ನ ಕೆರಿಯರ್‌ನಲ್ಲಿಯೇ ಈ ರೀತಿಯ ಪಾತ್ರ ಮಾಡಿರಲಿಲ್ಲ. ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ತುಂಬಾ ಖುಷಿಯಾಯಿತು. ಚಿತ್ರ ಸ್ಟೋರಿ ಓರಿಯಂಟೆಡ್ ಆಗಿದ್ದರಿಂದ, ನನ್ನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಸಾಕಷ್ಟು ತಯಾರಿ ಮಾಡಿಕೊಳ್ಳಲೇಬೇಕು ಎನ್ನಿಸಿತು. ಹಾಗಾಗಿ ಬಹಳಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಂಡು ಚಿತ್ರೀಕರಣಕ್ಕೆ ಮುಂದಾದೆ.

ಹೇಗಿತ್ತು ಪೂರ್ವ ತಯಾರಿ?
ಪೊಲೀಸ್ ಪೇದೆಯ ಪಾತ್ರಕ್ಕೆ ಆಯ್ಕೆಯಾಗುತ್ತಿದ್ದಂತೆ ನಾನು ನನ್ನ ಮನೆ ಪಕ್ಕದಲ್ಲಿಯೇ ಇದ್ದ ಬನಶಂಕರಿ ಪೊಲೀಸ್ ಸ್ಟೇಷನ್‌ಗೆ ಹೋಗಿ ಅಲ್ಲಿದ್ದ ಮಹಿಳಾ ಪೇದೆಗಳನ್ನು ಮಾತಾಡಿಸಿದೆ. ಅವರ ಕಷ್ಟ-ಸುಖಗಳನ್ನು ತಿಳಿದುಕೊಂಡೆ.
ಮನೆಯಲ್ಲಿ ಕುಳಿತು ಸಾಕಷ್ಟು ಮಹಿಳಾ ಪೊಲೀಸ್ ಪಾತ್ರಗಳನ್ನು ಅಧ್ಯಯನ ಮಾಡಿದೆ. ನನ್ನ ಮಾತಿನ ರೀತಿ, ಬಾಡಿ ಲ್ಯಾಂಗ್ವೇಜ್ ಎಲ್ಲವನ್ನೂ ಮತ್ತೆ ಮತ್ತೆ ರಿಹರ್ಸಲ್ ಮಾಡುವ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ
ಮಾಡಿದೆ.

ಗ್ರಾಫಿಕ್ಸ್‌ಗಳನ್ನು ಕಡಿಮೆ ಮಾಡಿ ನೈಜವಾಗಿಯೇ ಎಲ್ಲವನ್ನೂ ಶೂಟ್ ಮಾಡಿದ್ದರಿಂದ ನಾವು ಸಾಕಷ್ಟು ಸಮಯವನ್ನು ಅಧ್ಯಯನಕ್ಕೇ ಮೀಸಲಿಟ್ಟಿದ್ದೇವೆ. ಚಿತ್ರದಲ್ಲಿ ನಾನು ಮತ್ತು ಶಾಲಿನಿ ಸಿಸಿ ಟಿವಿ ಅಬ್ಸರ್ವ್ ಮಾಡುವ ಕೆಲಸ. ಅದಕ್ಕಾಗಿಯೇ ನಾವಿಬ್ಬರು ಸಿಸಿ ಟಿವಿ ರೂಂನಲ್ಲಿ ಕುಳಿತುಕೊಂಡು ಅಲ್ಲಿನ ಚಟುವಟಿಕೆಗಳನ್ನು ಗಮನಿಸಿದ್ದೇವೆ.

ಹೇಗಿದೆ ಮಹಿಳಾ ಪೊಲೀಸ್ ಲೋಕ?
ಮೊದಲು ಪೊಲೀಸರ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಈ ಚಿತ್ರದ ಕಾರಣಕ್ಕೆ ಸಾಕಷ್ಟು ತಿಳಿದುಕೊಳ್ಳುವಂತಾಯಿತು. ನಾವೆಲ್ಲ ನೆಮ್ಮದಿಯಿಂದ ಇರಬೇಕಾದರೆ ಪೊಲೀಸರು ತುಂಬಾ ಕಷ್ಟಪಡಬೇಕು. ಗಂಡಸರಾದರೆ ಪರವಾಗಿಲ್ಲ. ಆದರೆ ಮಹಿಳಾ ಪೇದೆಗಳ ಕಷ್ಟಗಳೇ ಬೇರೆ. ಸಾಮಾನ್ಯವಾಗಿ ಹಬ್ಬಗಳಲ್ಲಿ  ಮಹಿಳೆಯರಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ. ಸಂಸಾರದ ಜೊತೆ ಬೆರೆಯಲು ಸಾಧ್ಯವಾಗುವುದಿಲ್ಲ. ಹಬ್ಬಗಳಲ್ಲಿಯೇ ಅವರಿಗೆ ಹೆಚ್ಚು ಕೆಲಸ ಇರುತ್ತದೆ. ಅದೂ ಅಲ್ಲದೇ ಎಲ್ಲಿ ಏನೇ ನಡೆದರೂ ಅವರು ಹೋಗಬೇಕು. ಕೆಳ ಹಂತದಲ್ಲಿ ಕ್ರೈಂಗಳನ್ನು ತಡೆಗಟ್ಟುವವರು ಅವರೇ. ಮಹಿಳಾ ಪೇದೆಗಳಿಗೆ ಪುರುಷರಿಗಿಂತ ಭಿನ್ನವಾದ ಫಿಸಿಕಲ್ ಚಾಲೆಂಜ್‌ಗಳಿದ್ದಾವೆ.  

loader