ಪ್ರಧಾನಿ ಮೋದಿ, ಅಮಿತಾಭ್ ಬಚ್ಚನ್ ಹಿಂದಿಕ್ಕಿದ ಪ್ರಿಯಾಂಕ

First Published 6, Jul 2018, 8:38 AM IST
Priyanka Chopra Becomes The Most Followed Indian On Instagram
Highlights

ಖ್ಯಾತ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನೇ ಹಿಂದಿಕ್ಕಿ ಅತೀ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. 

ನವದೆಹಲಿ: ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸಾಧನೆ ಕಿರೀಟಕ್ಕೆ ಇದೀಗ ಇನ್ನೊಂದು ಗರಿ. ಫೋಟೋ ಷೇರಿಂಗ್‌ನ ಖ್ಯಾತ ಆನ್‌ಲೈನ್‌ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಪ್ರಿಯಾಂಕಾ ಇದೀಗ 2.5 ಕೋಟಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.

 ಈ ಮೂಲಕ ಪ್ರಧಾನಿ ನರೇಂದ್ರ ಮೋದಿ (1.35 ಕೋಟಿ), ನಟ ಅಮಿತಾಭ್‌ ಬಚ್ಚನ್‌ (95 ಲಕ್ಷ), ವಿರಾಟ್‌ ಕೊಹ್ಲಿ (2.27 ಕೋಟಿ), ಶಾರುಖ್‌ ಖಾನ್‌ (1.33 ಕೋಟಿ), ಸಲ್ಮಾನ್‌ ಖಾನ್‌ (1.73 ಕೋಟಿ), ಅಮೀರ್‌ ಖಾನ್‌ (1.2 ಕೋಟಿ), ದೀಪಿಕಾ ಪಡುಕೋಣೆ (2.49)ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ಏರಿದ್ದಾರೆ.

loader