Video viral: ಎರಡು ದಶಕಗಳ ಬಳಿಕ ಮತ್ತೆ ಒಂದಾದ ಪ್ರಿಯಾಂಕ ಛೋಪ್ರಾ-ಪ್ರೀತಿ ಝಿಂಟಾ!
2003 ರಲ್ಲಿ 'ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ನಂತರ, ಪ್ರಿಯಾಂಕಾ ಚೋಪ್ರಾ ಮತ್ತು ಪ್ರೀತಿ ಜಿಂಟಾ ಮತ್ತೆ ಒಂದಾದರು ಮತ್ತು ಒಟ್ಟಿಗೆ 'ಮೋಜಿನ ರಾತ್ರಿ' ನಡೆಸಿದರು. ಈ ಜೋಡಿಯು ಚಲನಚಿತ್ರ ಭ್ರಾತೃತ್ವದಲ್ಲಿ ಉತ್ತಮ ಸ್ನೇಹಕ್ಕಾಗಿ ಹೆಸರುವಾಸಿಯಾಗಿದೆ ಮತ್ತು ಇತ್ತೀಚೆಗೆ ಅವರು ಜೋನಾಸ್ ಬ್ರದರ್ಸ್ ಕನ್ಸರ್ಟ್‌ನಲ್ಲಿ ತಮ್ಮ ಕ್ಷಣವನ್ನು ಹೊಂದಿದ್ದರು.

ದೆಹಲಿ: 2003 ರಲ್ಲಿ 'ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ನಂತರ, ಪ್ರಿಯಾಂಕಾ ಚೋಪ್ರಾ ಮತ್ತು ಪ್ರೀತಿ ಜಿಂಟಾ ಮತ್ತೆ ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಜೋಡಿ ಇದೀಗ ಮತ್ತೆ ಒಂದಾಗಿದೆ. ಜೋನಾಸ್ ಬ್ರದರ್ಸ್ ಸಂಗೀತ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳು ಅತೀವ ಖುಷಿಪಟ್ಟಿದ್ದಾರೆ.
ಬಾಲಿವುಡ್‌ನಲ್ಲಿ ಈ ನಟಿಯರು ಒಟ್ಟಿಗೆ ನಟಿಸುವುದರಲ್ಲಿ, ಸ್ನೇಹಕ್ಕೆ ಹೆಸರುವಾಸಿಯಾಗಿದ್ದಾರೆ. ಅದ್ಯಾಗೂ ಸುಮಾರು ವರ್ಷಗಳ ಕಾಲ ಸಾರ್ವಜನಿಕವಾಗಿ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ ಪ್ರೀತಿ ಜಿಂಟಾ ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜೋನಾಸ್ ಬ್ರದರ್ಸ್ ಸಂಗೀತ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ಕಾಣಬಹುದು. ವಿಡಿಯೋದಲ್ಲಿ ಮತ್ತೆ ಒಟ್ಟಾಗಿರುವುದು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅದರಲ್ಲೂ ಪ್ರಿಯಾಂಕ್ ಛೋಪ್ರಾ ಧರಿಸಿರುವ ಕಪ್ಪು ಬಣ್ಣದ ಔಟ್ ಕಟ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಬಗ್ಗೆಯೇ ಅಭಿಮಾನಿಗಳು ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿವೆ..