ಪ್ರಿಯಾಂಕ ಅಂಡ್ ನಿಕ್ ಜಾನ್ಸ್ ಪ್ರೇಮ ಪುರಾಣದ ಊಹಾಪೋಹಕ್ಕೆಲ್ಲಾ ಇನ್ನೇನು ತೆರೆ ಬೀಳಲಿದೆಯೇ ಎನ್ನುವಷ್ಟರಲ್ಲಿಯೇ ಅವರಿಬ್ಬರೂ ದಾಂಪತ್ಯಕ್ಕೆ ಕಾಲಿಡುವ ಸಮಯ ಸನ್ನಿಹಿತವಾಗಿದೆಯೇ ಎನ್ನುವ ಮತ್ತೊಂದು ಊಹಾಪೋಹ ಜಾನ್ಸ್ ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಗರಿಗೆದರಿಕೊಂಡಿದೆ.

ಇಷ್ಟು ದಿನ ಹೊರ ದೇಶದಲ್ಲಿಯೇ ಜೊತೆ ಸೇರಿ ಸುತ್ತಾಟ ನಡೆಸಿದ್ದ  ಈ ಜೋಡಿಯ ಬಗ್ಗೆ ಗುಸುಗುಸು ಶುರುವಾಗಿ ಹತ್ತಿರ ಹತ್ತಿರ ಮೂರು ತಿಂಗಳು ಕಳೆದಿದೆಯಷ್ಟೇ. ಈಗ ಪ್ರಿಯಾಂಕ ತನ್ನ ಗೆಳೆಯ ಜಾನ್ಸ್‌ನನ್ನು ಭಾರತಕ್ಕೆ ಕರೆದುತಂದಿದ್ದಾರೆ. ಅಷ್ಟೇ ಅಲ್ಲ, ಫ್ಯಾಮಿಲಿ, ಫ್ರೆಂಡ್ಸ್‌ಗೆಲ್ಲಾ  ಇಂಟ್ರಡ್ಯೂಸ್ ಮಾಡಿಕೊಟ್ಟಿದ್ದಾರೆ. ಅಲ್ಲದೇ ಭರ್ಜರಿ ಟ್ರಿಪ್‌ಗಳನ್ನೂ ಎಂಜಾಯ್ ಮಾಡುತ್ತಿದ್ದಾರೆ.

ಇದೇ ವೇಳೆ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಏನು ಎಂದರೆ, ಒಂದೇ ರಿಂಗ್ ಜಾನ್ಸ್ ಮತ್ತು ಪ್ರಿಯಾಂಕಾ ಬೆರಳುಗಳಲ್ಲಿ ಕಾಣಿಸಿಕೊಂಡಿರುವುದು. ಒಂದೇ ದಿನ ಬೆಳಿಗ್ಗೆ ಜಾನ್ಸ್ ಕೈ ಬೆರಳಲ್ಲಿ ಇದ್ದ ಉಂಗುರ ಮಧ್ಯಾಹ್ನದ ವೇಳೆಗೆ ಪ್ರಿಯಾಂಕಾ ಬೆರಳನ್ನು  ಅಲಂಕರಿಸಿದೆ. ಇದರಿಂದ ಊಹಾಪೋಹಕ್ಕೆ ಮತ್ತೊಂದಷ್ಟು ಶಕ್ತಿ ಬಂದಿದೆ. ಇಬ್ಬರೂ ಅನ್‌ಅಫೀಶಿಯಲ್ ಆಗಿ ಎಂಗೇಜ್ ಆಗಿದ್ದಾರೆ. ಇನ್ನೇನಿದ್ದರೂ ಅಫೀಶಿಯಲ್ ಅನೌನ್ಸ್‌ಮೆಂಟ್ ಅಷ್ಟೇ ಬಾಕಿ ಎನ್ನುವ ಲೇಟೆಸ್ಟ್ ನ್ಯೂಸ್ ಹರಡುತ್ತಿದೆ.