ಗಣೇಶ್ ಅಭಿನಯದ ‘ಆರೆಂಜ್’ ಚಿತ್ರಕ್ಕೆ ಕೊನೆಗೂ ನಾಯಕಿ ಸಿಕ್ಕಿದ್ದಾಳೆ. ಹಲವು ದಿನಗಳ ಹುಡುಕಾಟದ ನಂತರ ಕಾಲಿವುಡ್ ನಟಿ, ‘ರಾಜಕುಮಾರ’ನ ಚೆಲುವೆ ಪ್ರಿಯಾ ಆನಂದ್ ಆಯ್ಕೆಯಾಗಿದ್ದಾರೆ.
ಬೆಂಗಳೂರು : ಗಣೇಶ್ ಅಭಿನಯದ ‘ಆರೆಂಜ್’ ಚಿತ್ರಕ್ಕೆ ಕೊನೆಗೂ ನಾಯಕಿ ಸಿಕ್ಕಿದ್ದಾಳೆ. ಹಲವು ದಿನಗಳ ಹುಡುಕಾಟದ ನಂತರ ಕಾಲಿವುಡ್ ನಟಿ, ‘ರಾಜಕುಮಾರ’ನ ಚೆಲುವೆ ಪ್ರಿಯಾ ಆನಂದ್ ಆಯ್ಕೆಯಾಗಿದ್ದಾರೆ.
ಅವರನ್ನು ತಮ್ಮ ಚಿತ್ರಕ್ಕೆ ಬರಮಾಡಿಕೊಂಡಿರುವ ನಿರ್ದೇಶಕ ಪ್ರಶಾಂತ್ ರಾಜ್, ‘ನಾಯಕಿಗಾಗಿ ಸಾಕಷ್ಟು ಹುಡುಕಾಟ ನಡೆದಿತ್ತು.
ಕೊನೆಗೆ ಪ್ರಿಯಾ ಅವರೇ ಆ ಪಾತ್ರಕ್ಕೆ ಸೂಕ್ತವೆನಿಸಿತು. ಅಂದುಕೊಂಡಂತೆ ಅವರನ್ನು ಒಮ್ಮೆ ಭೇಟಿ ಮಾಡಿ, ಕತೆ ಮತ್ತು ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಎಕ್ಸೈಟ್ ಆದರು. ಅಭಿನಯಿಸಲು ತಾವು ರೆಡಿ ಅಂದರು’ ಎನ್ನುತ್ತಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದಲ್ಲಿ ಪ್ರಿಯಾ ಆನಂದ್ ನಟಿಸಿದ್ದರು.
ಈ ಚಿತ್ರದಲ್ಲಿ ಆಕೆಯ ಪಾತ್ರ ‘‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಮಂಜುಳಾ ನಿರ್ವಹಿಸಿದ ದುರ್ಗಾ ಪಾತ್ರದಂತಿದೆ’ ಅಂತಾರೆ ನಿರ್ದೇಶಕರು. ಶನಿವಾರದಿಂದಲೇ ಶೂಟಿಂಗ್‌ನಲ್ಲಿ ಇರುತ್ತಾರೆ ಪ್ರಿಯಾ ಆನಂದ್.
