ನವದೆಹಲಿ[ಡಿ.13]: ಓರು ಅಡಾರ್‌ ಲವ್‌ ಎಂಬ ಮಲಯಾಳಂ ಚಿತ್ರದ ಹಾಡೋಂದರಲ್ಲಿ ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದ ನಟಿ ಪ್ರಿಯಾ ವಾರಿಯರ್‌, ಭಾರತದಲ್ಲಿ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಗೂಗಲ್‌ ವರ್ಷದ ಶೋಧಿಸಲಾದ ವ್ಯಕ್ತಿಗಳಲ್ಲಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್‌ ಜೋನ್ಸ್‌ ಎರಡನೇ ಸ್ಥಾನ ಪಡೆದಿದ್ದು, ಬಿಗ್‌ ಬಾಸ್‌ ಸ್ಪರ್ಧಿ ಸ್ಪಪ್ನಾ ಚೌಧರಿ ನಂತರದ ಸ್ಥಾನದಲ್ಲಿದ್ದಾರೆ. ಇದೇ ವೇಳೆ ವಿಷಯಾಧಾರಿತ ಗೂಗಲ್‌ ಶೋಧದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ, ಐಪಿಎಲ್‌- 2018 ಹಾಗೂ ಬಿಗ್‌ ಬಾಸ್‌ ಕುರಿತ ಶೋಧಗಳು ಅಗ್ರ ಸ್ಥಾನದಲ್ಲಿವೆ.

ಪ್ರಿನ್ಸ್‌ ಹ್ಯಾರಿಯನ್ನು ವಿವಾಹ ಆದ ಮೇಘನ್‌ ಮರ್ಕೆಲ್‌ ಜಾಗತಿಕ ಗೂಗಲ್‌ ಶೋಧದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.