ಮುಂಬೈ:  ಕಣ್ ಹೊಡೆದು ರಾತ್ರಿ ಬೆಳಗಾಗುವುದರಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪ್ರಿಯಾ ಈಗ ತಮ್ಮ ಕರಿಯರ್’ನ ಮೊದಲ ಪ್ರಶಸ್ತಿ ಸಂದ ಸಂಭ್ರಮದಲ್ಲಿದ್ದಾರೆ.

 ಒರು ಅಡರ್ ಲವ್ ಎಂಬ ಮಲಯಾಳಂ ಚಿತ್ರದ ಹಾಡಿನ ಮೂಲಕ ಲಕ್ಷಾಂತರ ಅಭಿಮಾನಿಗಳು ಪ್ರಿಯಾಗೆ ಹುಟ್ಟಿಕೊಂಡರು. ಹುಬ್ಬು ಹಾರಿಸಿ ಹಾಡೊಂದರಿಂದಲೇ ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದ ಚೆಲುವೆ ಪ್ರಿಯಾ ನಟನೆ ಎನ್ನರನ್ನೂ ಕೂಡ ಕ್ಲೀನ್ ಬೋಲ್ಡ್ ಮಾಡಿತ್ತು. ಅವರ ಕಣ್ ಸನ್ನೆಯನ್ನು ಕದ್ದು ಕದ್ದು ಪ್ರಯತ್ನಿಸಿದ್ದರು. 

ಈ ತರಹ ಫ್ಯಾನ್’ಗಳಿಗೆ ಕ್ರೇಜ್  ಹುಟ್ಟಿಸಿದ್ದ ಪ್ರಿಯಾಗೆ ಚಿತ್ರ ಬಿಡುಗಡೆಯಾಗುವುದರ ಮೊದಲೇ  ಪ್ರಶಸ್ತಿ ಒಲಿದು ಬಂದಿದೆ. ಈ ವಿಚಾರವನ್ನು ಸ್ವತಃ ಪ್ರಿಯಾ ಅವರೇ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಗೆ ವೈರಲ್ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿ ದೊರಕಿದೆ.
  
ಇದು ತಮಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ತಮ್ಮ ಔಟ್ಲುಕ್’ಗಾಗಿ ಸಂದ ಈ ಪ್ರಶಸ್ತಿಯ ಸಂಪೂರ್ಣ ಕ್ರೆಡಿಟ್ ಒರು ಅಡರ್ ಲವ್ ಚಿತ್ರ ತಂಡಕ್ಕೆ ಸಲ್ಲಬೇಕು ಎಂದು ಪ್ರಿಯಾ ಹೇಳಿದ್ದಾರೆ.