ಸ್ಯಾಂಡಲ್’ವುಡ್’ನಲ್ಲಿ ಸುದ್ದಿಗೆ ಬಿದ್ದ ನಟಿಯಿವರು!

entertainment | Wednesday, May 30th, 2018
Suvarna Web Desk
Highlights

ಈ ವಾರ ಸುದ್ದಿಗೆ ಬಿದ್ದವರು ಪ್ರಜ್ಜು ಪೂವಯ್ಯ. ಈಕೆ ನಟಿಸಿದ ಆದರ್ಶ್ ಮೂರು ವರ್ಷ ಅಜ್ಞಾತವಾಸ ಅನುಭವಿಸಿತ್ತು. ಈಗ ತೆರೆಕಾಣಲಿರುವ ಈ ಚಿತ್ರದಲ್ಲಿ ಪ್ರಜ್ಜುಗೆ ಒಳ್ಳೆಯ ಪಾತ್ರವೇ ಇದೆಯಂತೆ. 

ಈ ವಾರ ಸುದ್ದಿಗೆ ಬಿದ್ದವರು ಪ್ರಜ್ಜು ಪೂವಯ್ಯ. ಈಕೆ ನಟಿಸಿದ ಆದರ್ಶ್ ಮೂರು ವರ್ಷ ಅಜ್ಞಾತವಾಸ ಅನುಭವಿಸಿತ್ತು. ಈಗ ತೆರೆಕಾಣಲಿರುವ ಈ ಚಿತ್ರದಲ್ಲಿ ಪ್ರಜ್ಜುಗೆ ಒಳ್ಳೆಯ ಪಾತ್ರವೇ ಇದೆಯಂತೆ.

‘ಚಿತ್ರದಲ್ಲಿ ನನ್ನದು ಶ್ರೀಮಂತ ಮನೆತನದ ಸಿಂಪಲ್ ಹುಡುಗಿಯ ಪಾತ್ರ. ಹೆಸರು ಶ್ವೇತಾ. ತಾಯಿ ಇಲ್ಲದ ನತದೃಷ್ಟೆ. ತಂದೆಯ ಆಶ್ರಯದಲ್ಲಿ ಬೆಳೆದವಳು. ಆಕೆ ಬಾಲ್ಯ ಮತ್ತು ಪ್ರೌಢ  ಶಿಕ್ಷಣ ಮುಗಿಸಿ, ಕಾಲೇಜಿಗೆ ಎಂಟ್ರಿಯಾದ ನಂತರ ಹೇಗೆಲ್ಲ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾಳೆ, ಆ ಬದಲಾವಣೆಗಳು ಆಕೆಯ ಬದುಕಿನಲ್ಲಿ ಏನೆಲ್ಲ ಸಂಕಷ್ಟಗಳು ಬರುತ್ತವೆ ಎನ್ನುವುದು ನನ್ನ ಪಾತ್ರ’ ಎನ್ನುತ್ತಾರೆ.

‘ಚಿತ್ರದ ಬಿಡುಗಡೆ ನಮ್ ಕೈಯಲ್ಲಿಲ್ಲ. ನಾನು ಆರ್ಟಿಸ್ಟ್ ಮಾತ್ರ. ನಮ್ ಕೆಲಸ ಏನೋ.. ಅದನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಿದ್ದೆವು. ಆದ್ರೆ ತಾಂತ್ರಿಕವಾಗಿ ತಡವಾಗಿದೆ. ಆದ್ರೂ ಸಿನಿಮಾ ಚೆನ್ನಾಗಿದೆ. ಜನರಿಗೆ ಇಷ್ಟವಾಗುತ್ತೆ’ ಎನ್ನುವುದು ಅವರ ಸ್ಪಷ್ಟನೆ. ಈ ಚಿತ್ರದ ನಂತರ ಪಜ್ಜು ಪೂವಯ್ಯ ನಾಯಕಿ ಆಗಿರುವ ‘ರಿಚ್ಚಿ’ ಹೆಸರಿನ ಒಂದು ಚಿತ್ರ  ರಿಲೀಸ್‌ಗೆ ರೆಡಿ ಆಗಿದೆ. ಬಹುತೇಕ ಅದು ಹೊಸಬರೇ ನಿರ್ಮಿಸಿ, ನಿರ್ದೇಶಿಸಿದ ಚಿತ್ರ. ಈ ಹಿಂದೆ ಅದು ‘ಅಭಿಸಾರಿಕೆ ’ಹೆಸರಲ್ಲಿ ಸೆಟ್ಟೇರಿದ್ದು, ಈಗ ‘ರಿಚ್ಚಿ’ ಅಂತ ಟೈಟಲ್ ಬದಲಾಗಿದೆಯಂತೆ.

ವರ್ಷದಲ್ಲಿ ಎರಡೋ ಅಥವಾ ಅದಕ್ಕಿಂತ ಹೆಚ್ಚೋ ಚಿತ್ರಗಳ ಮೂಲಕ ಕನ್ನಡದಲ್ಲಿ ಆಗಾಗ ತೆರೆ ಮೇಲೆ ಬಂದು ತಮ್ಮ ಇರುವಿಕೆ ತೋರಿಸುವ ಪ್ರಜ್ಜು ಪೂವಯ್ಯ, ಅತ್ತ ಟಾಲಿವುಡ್‌ನಲ್ಲಿ  ಬಹುಬೇಡಿಕೆಯ ನಟಿ ಆಗುತ್ತಿದ್ದಾರೆ. ‘ಹೈಲ್ಪ್‌ಲೈನ್’ ಹೆಸರಿನ ಚಿತ್ರ ಚಿತ್ರದ ಮೂಲಕ ಅಲ್ಲಿ ಖಾತೆ ತೆಗೆದಿದ್ದೇ ತಡ ಹೊಸ ಅವಕಾಶಗಳು ಅವರಿಗೆ ಸಾಕಷ್ಟು ಸಿಗುತ್ತಿವೆಯಂತೆ. ಸದ್ಯಕ್ಕೀಗ ‘ ಪ್ರೇಮ ಅಂತಾ ಈಸೀ ಕಾದು’ ಎಂಬ ಮತ್ತೊಂದು ತೆಲುಗು ಚಿತ್ರಕ್ಕೆ ಪ್ರಜ್ಜು ಪೂವಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಬಳಿ ಸಹಾಯಕರಾಗಿದ್ದ ಈಶ್ವರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರ. ರಾಜೇಶ್ ಕುಮಾರ್ ಈ ಚಿತ್ರದ ಹೀರೋ.   

Comments 0
Add Comment

    Related Posts