ಬಹುನಿರೀಕ್ಷಿತ ಸಿನಿಮಾ ಪ್ರಭಾಸ್ ’ಸಾಹೋ’ ಸಿನಿಮಾದ ಟೀಸರ್ ರಿಲೀಸಾಗಿದೆ. 

ಪ್ರಭಾಸ್ ಇದರಲ್ಲಿ ಈ ಹಿಂದೆ ಮಾಡಿದ್ದಕ್ಕಿಂತ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. ಚೇಸಿಂಗ್ ಸೀನ್, ಆ್ಯಕ್ಷನ್, ಫೈಟಿಂಗ್ ಎಲ್ಲವೂ ಗಮನ ಸೆಳೆದಿದೆ. 

ಸಾಹೋ ಟೀಸರ್ ಯಾವ ಹಾಲಿವುಡ್ ಸಿನಿಮಾಗೂ ಕಡಿಮೆಗೂ ಇಲ್ಲದಂತೆ ಇದೆ. ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ರಭಾಸ್ ಆ್ಯಕ್ಷನ್ ಪ್ರೇಕ್ಷಕರು ಫಿದಾ ಆಗಿದ್ದಾರೆ. 

 

ಪ್ರಭಾಸ್ ಬಾಲಿವುಡ್ ಮೊದಲ ಸಿನಿಮಾ ಇದಾಗಿದ್ದು ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.  ಸಾಹೋ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಹೈದರಾಬಾದ್, ಮುಂಬೈ, ದುಬೈ, ರೊಮಾನಿಯಾ ಹಾಗೂ ಯುರೋಪ್ ನ ಕೆಲವು ಭಾಗಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಆಗಸ್ಟ್ 15 ರಂದು ಸ್ವತಂತ್ರ ದಿನಾಚರಣೆಯಂದು ಸಾಹೋ ರಿಲೀಸ್ ಆಗಲಿದೆ.