ನಟಿ ಪೂಜಾಗಾಂಧಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಸದ್ದು ಮಾಡುತ್ತಿರುವುದು ‘ದಂಡುಪಾಳ್ಯ-2' ಚಿತ್ರದ ಕಾರಣಕ್ಕೆ. ಸಿಕ್ಕಾಪಟ್ಟೆಹಾಟ್‌ ಫೋಟೋ ಒಂದು ಹುಬ್ಬೇರಿಸಿದೆ. ಆ ಫೋಟೋದಲ್ಲಿ ಇಬ್ಬರು ಹುಡುಗಿಯರೇ ಕಿಸ್‌ ಮಾಡಿಕೊಂಡಿದ್ದಾರೆ. ಆ ಇಬ್ಬರು ಹುಡುಗಿಯರ ಪೈಕಿ ಒಬ್ಬರು ನಟಿ ಪೂಜಾ ಗಾಂಧಿ. ಮತ್ತೊಬ್ಬರು ಯಾರೆಂಬುದನ್ನು ಗುಟ್ಟಾಗಿಡಲಾಗಿದೆ. ಅನಾಮಿಕ ಹುಡುಗಿಯೊಬ್ಬಳು ಮಳೆ ಹುಡುಗಿಗೆ ಡೀಪ್‌ ಲಿಪ್‌ ಕಿಸ್‌ ಕೊಡುತ್ತಿದ್ದಾರೆ. ಇಬ್ಬರು ಹುಡುಗಿಯರ ರೋಮ್ಯಾನ್ಸ್‌ ದೃಶ್ಯದಂತೆ ಇದು ಕಾಣುತ್ತಿದ್ದು ಹುಡುಗಿ ಜತೆ ಲಿಪ್‌ ಕಿಸ್‌ ಮಾಡಿಸಿಕೊಳ್ಳುವ ಮೂಲಕ ಪೂಜಾ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಿದರೆ ಹೇಳುವುದೇನು?

‘ಹುಡುಗ- ಹುಡುಗಿ ಲಿಪ್‌ ಕಿಸ್‌ ಸಹಜ. ಹಾಗಂತ ಹುಡುಗಿ ಜತೆ ಲಿಪ್‌ ಕಿಸ್‌ ಮಾಡಿಸಿಕೊಂಡರೆ ತಪ್ಪೇನಲ್ವಲ್ಲ? ಈಗ ಅದೆಲ್ಲ ಕಾಮನ್‌ ವಿಷಯ. ಹಾಗೆ ನೋಡಿದರೆ ಹುಡುಗಿ ಜತೆ ಲಿಪ್‌ ಕಿಸ್‌ ಮಾಡುವ ಬಗ್ಗೆ ನನಗೆ ನಿರ್ದೇಶಕರು ಮೊದಲೇ ಹೇಳಿದ್ದರು. ಹೀಗಾಗಿ ಈ ಲಿಪ್‌ ಟು ಲಿಪ್‌ ಕಿಸ್‌ ಬಗ್ಗೆ ಅಭ್ಯಂತರವಾಗಲಿ, ಮುಜುಗರವಾಗಲಿ ಇಲ್ಲ. ಒಬ್ಬ ಕಲಾವಿದೆಯಾಗಿ ಯಾವ ರೀತಿಯ ಪಾತ್ರ ಬೇಕಾದರೂ ಮಾಡುತ್ತೇನೆ. ಕತೆಗೆ ಪೂರಕವಾಗಿದ್ದರೆ ಎಂಥ ದೃಶ್ಯಗಳಲ್ಲಿ ಬೇಕಾದರೂ ಕಾಣಿಸಿಕೊಳ್ಳಬಲ್ಲೆ' ಎನ್ನುತ್ತಾರೆ ಪೂಜಾ ಗಾಂಧಿ. ಆದರೆ, ತಮಗೆ ಹೀಗೆ ಲಿಪ್‌ ಕಿಸ್‌ ಮಾಡುತ್ತಿರುವ ಹುಡುಗಿ ಹೆಸರು ಮಾತ್ರ ಪೂಜಾ ಗಾಂಧಿ ಹೇಳುತ್ತಿಲ್ಲ. ಆ ಹುಡುಗಿ ಯಾರು? ಆ ಲಿಪ್‌ ಲಾಕ್‌ ಯಾಕೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು ಎಂಬುದು ಪೂಜಾ ಮನವಿ. ಹಾಗೆ ನೋಡಿದರೆ ‘ದಂಡುಪಾಳ್ಯ' ಚಿತ್ರದಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಳ್ಳುವ ಮೂಲಕ ಸಿಕ್ಕಾಪಟ್ಟೆಹಾಟ್‌ ಸುದ್ದಿಗೆ ಕಾರಣವಾದರು. ಆಗ ತಮ್ಮ ಬೆತ್ತಲೆ ಬೆನ್ನಿನಿಂದಲೇ ಸಿನಿಮಾಗೆ ಸಾಕಷ್ಟುಲಿಪ್ಟ್‌ ಕೊಟ್ಟಿದ್ದರು. ಈಗ ಲಿಪ್‌ ಕಿಸ್‌ ಮೂಲಕ ಅದೂ ಕೂಡ ಹುಡುಗಿ ಜತೆ ರೋಮ್ಯಾನ್ಸ್‌ ಮಾಡುವ ಮೂಲಕ ‘ದಂಡುಪಾಳ್ಯ-2' ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಅಂದಹಾಗೆ ಈ ಹಾಟ್‌ ದೃಶ್ಯ ನಡೆಯುವುದು ಜೈಲಿನಲ್ಲಿ. ಮಹಿಳಾ ಸೆಲ್‌ನಲ್ಲಿ ನಡೆಯುವ ಕಿಸ್‌ ಸ್ಕಾ್ಯಂಡಲ್‌ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಿನಿಮಾ ನೋಡಬೇಕು. ಅಂದಹಾಗೆ ‘ದಂಡುಪಾಳ್ಯ-2' ನಿರ್ದೇಶಕರು ಶ್ರೀನಿವಾಸರಾಜು. 

ವರದಿ: ಕನ್ನಡಪ್ರಭ, ಸಿನಿವಾರ್ತೆ