ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯೊಂದಿಗೆ ಮಾಡಿದ ರಾಜಕಿಯೇತರ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಪ್ರಕಾಶ್ ಪತ್ನಿ ಪೋನಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ‘ದಯವಿಟ್ಟು ಚಿತ್ರೋದ್ಯಮದವರನ್ನು ಬಿಟ್ಟು ಬಿಡಿ’ ಎಂದು ಕೇಳಿ ಕೇಳಿಕೊಂಡಿದ್ದಾರೆ.

‘ಮಿ. ಪಿಎಂ ದಯಮಾಡಿ ನಮ್ಮ ಚಿತ್ರರಂಗದವರನ್ನು ಬಿಟ್ಟುಬಿಡಿ. ನಿಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ. ನನಗೆ ಅವರ ಪರಿಸ್ಥಿತಿ ಅರ್ಥವಾಗುತ್ತದೆ. ಅವರಿಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುವಂತಹ ಸ್ಥಿತಿ ಅವರದ್ದಾಗಿರುತ್ತದೆ. ಅವರು ನಿಮಗೆ ಹೇಗೆ ‘ಇಲ್ಲ’ ಎನ್ನುತ್ತಾರೆ. ಹಾಗಾಗಿ ಒಪ್ಪಿಕೊಳ್ಳುತ್ತಾರೆ. ಮುಂದೊಂದು ದಿನ ನೀವು ಖಾನ್ ಗಳ ಜೊತೆ ಕುಳಿತು ಸಂದರ್ಶನ ನಡೆಸಿದರೂ ಅಚ್ಚರಿಯಾಗುವುದಿಲ್ಲ. ದಯಮಾಡಿ ನಮ್ಮನ್ನು ಬಿಟ್ಟು ಬಿಡಿ’ ಎಂದು ಬರೆದುಕೊಂಡಿದ್ದಾರೆ.