ಪವರ್ ಸ್ಟಾರ್ ಮಾಜಿ ಪತ್ನಿ ಮತ್ತೊಂದು ಮದುವೆಗೆ ಸಿದ್ಧರಾಗಿದ್ದಾರೆ. ಸಿದ್ಧರಾಗಿರುವುದು ಮಾತ್ರ ಅಲ್ಲ ಎಂಗೆಜ್‌ಮೆಂಟ್‌ ಕೂಡ ಮಾಡಿಕೊಂಡಿದ್ದಾರೆ. ಮಕ್ಕಳ ಎದುರಿನಲ್ಲಿಯೇ  ಒಂದು ಕಾಲದ ಮಾಡೆಲ್ ಕಮ್ ನಟಿ ಹೊಸ ಬಾಳಿಗೆ ಅಡಿಯಿಡಲು ಮುಂದಾಗಿದ್ದಾರೆ. 

ಪವರ್ ಸ್ಟಾರ್ ಮಾಜಿ ಪತ್ನಿ ಮತ್ತೊಂದು ಮದುವೆಗೆ ಸಿದ್ಧರಾಗಿದ್ದಾರೆ. ಸಿದ್ಧರಾಗಿರುವುದು ಮಾತ್ರ ಅಲ್ಲ ಎಂಗೆಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ನಾವು ಹೇಳ್ತಾ ಇರೋದು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಂಸಾರದ ಬಗ್ಗೆ.

ಹೌದು ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ತನ್ನ ಮಕ್ಕಳ ಎದುರಿನಲ್ಲಿಯೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಕಳೆದ ವಾರದ ಕೊನೆಯಲ್ಲಿ ನಡೆದ ಎಗೆಂಜ್‌ಮೆಂಟ್‌ನಲ್ಲಿ ಪುತ್ರ ಅಖೀರ ನಂದನ್[14] ಮತ್ತು ಪುತ್ರಿ ಆಧ್ಯಾ [8] ಹಾಜರಿದ್ದರು.

ನನ್ನ ಮಕ್ಕಳಿಲ್ಲದೇ ನನ್ನ ಸಂತಸವಿಲ್ಲ. ಈ ದಿನ ಇಬ್ಬರು ನನ್ನೊಂದಿಗೆ ಇದ್ದಾರೆ. ನಾನು ಅಭಿಮಾನಿಗಳಿಗೂ ಧನ್ಯವಾದ ಹೇಳುತ್ತಿದ್ದೇನೆ ಎಂದು ರೇಣು ದೇಸಾಯಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು ಅಲ್ಲದೆ ಎಂಗೆಂಜ್‌ಮೆಂಟ್‌ನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಮಾಜಿ ಪತ್ನಿಗೆ ಶುಭಕೋರಿದ ಪವರ್‌ಸ್ಟಾರ್
ತಾನು ಕೈಹಿಡಿಯುತ್ತಿರುವ ವ್ಯಕ್ತಿ ಯಾರು ಎಂಬ ವಿವರಗಳನ್ನು ಮಾತ್ರ ರೇಣು ದೇಸಾಯಿ ಬಹಿರಂಗಮಾಡಿಲ್ಲವಾದರೂ ಮಾಜಿ ಪತಿ ಪವನ್ ಕಲ್ಯಾಣ್ ಸಹ ಶುಭಹಾರೈಸಿದ್ದಾರೆ. ‘ಹೊಸ ಜೀವನ ಆರಂಭಿಸುತ್ತಿರುವ ನಿಮಗೆ ಶುಭಾಶಯ’ ಎಂದು ಪವನ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಟಾಲಿವುಡ್‌ನಲ್ಲಿ ಈ ಜೋಡಿ ಜಾನಿ[2000], ಬದ್ರಿ[2003]ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು. 2009ರಲ್ಲಿ ರೇಣು ಮತ್ತು ಪವನ್ ಕಲ್ಯಾಣ್ ದಾಂಪತ್ಯಕ್ಕೆ ಕಾಲಿರಿಸಿದ್ದರು. ಆದರೆ 2012ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.