ಹಿಂದೂಗಳ ಮದುವೆ ವೇಳೆ ವರನ ಕಾಯಿಗಂಟು ಇಲ್ಲವೇ ಚಪ್ಪಲಿ ಕದಿಯುವುದು ಒಂದು ಸಂಪ್ರದಾಯ. ಇತ್ತೀಚೆಗೆ ಜೋಧ್‌ಪುರದಲ್ಲಿ ನಡೆದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನ್ಸ್‌ ಮದುವೆ ವೇಳೆಯೂ ನಟಿ ಪರಿಣಿತಿ ಚೋಪ್ರಾ ಇದೇ ಕೆಲಸ ಮಾಡಿದ್ದಾಳೆ.

ವಿವಾಹದ ವೇಳೆ ತನ್ನ ಭಾವ ನಿಕ್‌ರ ಶೂ ಕದ್ದಿದ್ದಾಳೆ. ಕೆಲ ಸಮಯದ ಬಳಿಕ ಶೂ ಕಾಣದೇ ನಿಕ್‌ ಅತ್ತಿತ್ತ ನೋಡುತ್ತಲೇ, ಅಡಗಿಸಿದ್ದ ಶೂ ಬೇಕಿದ್ದರೆ 37 ಕೋಟಿ ರು. ಕೊಡಿ ಎಂದು ಬೇಡಿಕೆ ಇಟ್ಟಿದ್ದಾಳೆ. ಕೊನೆಗೆ 5 ಲಕ್ಷ ರು.ಗೆ ಚೌಕಾಸಿ ನಡೆದು, ಹಣ ಕೊಡಲು ಒಪ್ಪಿದ ಬಳಿಕ ಭಾವನ ಶೂಗಳನ್ನು ಪರಿಣಿತಿ ನೀಡಿದ್ದಾಳಂತೆ.