ಪರಿಣೀತಿ ಚೋಪ್ರಾ, ಅರ್ಜುನ್ ಲವ್ವೋ ಲವ್ವು

https://static.asianetnews.com/images/authors/b348a094-0bef-5801-a1f6-61e57071185f.jpg
First Published 6, Sep 2018, 10:43 AM IST
Parineeti Chopra and Arjun Kapoor falls love with photoshoot
Highlights

‘ಓಹ್ ನೋ... ಶೀ... ಅರ್ಜುನ್ ಕಪೂರ್ ಎಕ್ಸ್‌ಕ್ಯೂಸ್ ಮೀ, ಐ ಹ್ಯಾವ್ ನೋ ಡೇಟ್ಸ್ (ನನಗೆ ಈಗ ಸಮಯದ ಅಭಾವವಿದೆ) ನೀನು ಬೇಕಿದ್ದರೆ ನನ್ನ ಮ್ಯಾನೇಜರ್ ಮೀಟ್ ಮಾಡಿ ಡೇಟ್ಸ್ ತೆಗೆದುಕೋ’

ಒಂದು ಫೋಟೋಶೂಟ್ ನಡೆಯುತ್ತೆ. ಅಲ್ಲಿ ಪರಿಣೀತಿ ಚೋಪ್ರಾ ಮತ್ತು ಅರ್ಜುನ್ ಕಪೂರ್ ಒಟ್ಟಿಗೆ ಚೆಂದಗೆ ಕಾಣಿಸಿಕೊಳ್ಳುತ್ತಾರೆ. ಅವರಿಬ್ಬರೂ ಒಟ್ಟಿಗೆ ಇದ್ದ ಫೋಟೋಗೆ ಬಾರಿ ಮೆಚ್ಚುಗೆಯೂ ವ್ಯಕ್ತವಾಗುತ್ತೆ. ಅದು ಮ್ಯಾಗ್‌ಜೀನ್ ಒಂದರ ಮುಖಪುಟವೂ ಆಗುತ್ತೆ. ಹೀಗೆ ಚೆಂದವಾಗಿ ಬಂದ ಕವರ್ ಪೇಜ್ ಅನ್ನು ಪರಿಣೀತಿಮತ್ತು ಅರ್ಜುನ್ ಕಪೂರ್ ಇಬ್ಬರೂ ತಮ್ಮ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇದು ಸಾಮಾನ್ಯ ಘಟನೆ. ಆದರೆ, ಅಸಲಿಯಾದ ಫನ್ನಿ ಕತೆ ಶುರುವಾಗುವುದೇ ಇಲ್ಲಿಂದ.

ಹೀಗೆ ಹಂಚಿಕೊಂಡ ಪೋಸ್ಟ್‌ಗಳಿಗೆ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡುತ್ತಾರೆ. ಅವುಗಳಲ್ಲಿ ಹೆಚ್ಚಿನ ಕಮೆಂಟ್‌ಗಳು ಹೀಗಿವೆ. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ’, ‘ನೀವಿಬ್ಬರೂ ಯಾಕೆ ಬೇಗ ಮದುವೆಯಾಗಬಾರದು’, ‘ಅರ್ಜುನ್ ನೀವು ಬೇಗ ಪರಿಣೀತಿಯನ್ನು ಮದುವೆಯಾಗಿಬಿಡಿ’, ‘ಜೋಡಿ ಎಂದರೆ ಹೀಗಿರಬೇಕು’...ಎಂಬಿತ್ಯಾದಿ.

ಹೀಗೆ ಸಾಕಷ್ಟು ಕಮೆಂಟ್‌ಗಳು ಹರಿದು ಬಂದ ಮೇಲೆ ಅರ್ಜುನ್ ಒಂದು ರಿಪ್ಲೈ ಮಾಡುತ್ತಾರೆ, ‘ನನಗೀಗ ಪರಿಣಿತಿ ಮದುವೆಯಾಗುವುದಕ್ಕೆ ಅವಸರವೇನಿಲ್ಲ. ಪರಿಣಿತಿ ಚೋಪ್ರಾ ನನಗೆ ಇನ್ನು ಸ್ವಲ್ಪ ವಯಸ್ಸಾಗಿ ಆಕರ್ಷಕವಾಗಿ ಕಾಣುವ ತನಕ ಸ್ವಲ್ಪ ಕಾಯಿರಿ’ ಎಂದು. ಅಲ್ಲಿಯವರೆಗೂ ಅಭಿಮಾನಿಗಳು ಏನೋ ಕಮೆಂಟ್ ಮಾಡುತ್ತಿದ್ದರು. ಯಾವಾಗ ಅರ್ಜುನ್ ಈ ರೀತಿ ರಿಪ್ಲೆ ಮಾಡಿ ಪರಿಣೀತಿ ಕಾಲೆಳೆದರೋ, ಇನ್ನು ಸುಮ್ಮನಿರುವುದು ಬೇಡ ಎಂದು ಹೇಳಿ ಪರಿಣಿತಿ ಪಕ್ಕಾ ಪ್ರೊಫೆಷನಲ್ ಆ್ಯಕ್ಟರ್ ಸ್ಟೈಲ್‌ನಲ್ಲಿ ಅರ್ಜುನ್ ಕಾಲೆಳೆದುಬಿಟ್ಟಿದ್ದಾರೆ.

‘ಓಹ್ ನೋ... ಶೀ... ಅರ್ಜುನ್ ಕಪೂರ್ ಎಕ್ಸ್‌ಕ್ಯೂಸ್ ಮೀ, ಐ ಹ್ಯಾವ್ ನೋ ಡೇಟ್ಸ್ (ನನಗೆ ಈಗ ಸಮಯದ ಅಭಾವವಿದೆ) ನೀನು ಬೇಕಿದ್ದರೆ ನನ್ನ ಮ್ಯಾನೇಜರ್ ಮೀಟ್ ಮಾಡಿ ಡೇಟ್ಸ್ ತೆಗೆದುಕೋ’ ಎಂದು ಟ್ವೀಟ್ ಮಾಡಿಬಿಟ್ಟಿದ್ದಾರೆ ಪರಿಣೀತಿ.

ಇದಕ್ಕೆ ಅರ್ಜುನ್ ‘ನಾನು ನಿಮ್ಮ ಮ್ಯಾನೇಜರ್ ಇಬ್ಬರೂ ಮದುವೆಯಾದರೆ ಅದು ಸೂಪರ್ ಶಾದಿಯಾಗುತ್ತದೆ’ ಎಂದು ರಿಪ್ಲೈ ಮಾಡಿದ್ದರೆ, ‘ನಾನೀಗ ನೇಪಾಳದಲ್ಲಿದ್ದೇನೆ. ನೀನಿರುವಲ್ಲಿಗೇ ಬಂದು ಎಲ್ಲದ್ದಕ್ಕೂ ಉತ್ತರ ನೀಡುವೆ’ ಎಂದು ಹೇಳಿ ಒಂದು ಮಟ್ಟಕ್ಕೆ ಕಾಲೆಳೆಯುವ ಆಟಕ್ಕೆ ತೆರೆ ಎಳೆದಿದ್ದಾರೆ.

ಆದರೆ ಇವರಿಬ್ಬರ ಟ್ವಿಟ್ಟರ್ ವಾರ್‌ನಲ್ಲಿ ಅಭಿಮಾನಿಗಳು ಒಂದಷ್ಟು ಪುಕ್ಕಟೆ ಮನರಂಜನೆ ಪಡೆಯುವುದರ ಜೊತೆಗೆ ತಮ್ಮ ಇಷ್ಟ ಕಷ್ಟಗಳನ್ನೂ ಕಮೆಂಟಿಸಿಕೊಂಡಿದ್ದಾರೆ.

 

loader