2 ವಾರದಲ್ಲಿ 200 ಕೋಟಿ ಸಂಪಾದಿಸಿದ ಪದ್ಮಾವತ್‌

First Published 6, Feb 2018, 11:54 AM IST
Padmavat collects 220 cr rs in two weeks
Highlights

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಚಲನಚಿತ್ರ ‘ಪದ್ಮಾವತ್‌’ ಬಿಡುಗಡೆಯಾದ ಎರಡೇ ವಾರದಲ್ಲಿ 200 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ.

ಮುಂಬೈ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಚಲನಚಿತ್ರ ‘ಪದ್ಮಾವತ್‌’ ಬಿಡುಗಡೆಯಾದ ಎರಡೇ ವಾರದಲ್ಲಿ 200 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ರಜಪೂತ ಸಮುದಾಯ ಟ್ರೇಲರ್‌ ಬಿಡುಗಡೆಯಾದಂದಿನಿಂದ ಚಿತ್ರ ಬಿಡುಗಡೆ ನಿಷೇಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತು.

ಸುಪ್ರಿಂಕೋರ್ಟ್‌ ಒಪ್ಪಿಗೆಯ ನಂತರ ಜ.25ರಂದು ಬಿಡುಗಡೆಯಾದಲ್ಲಿಂದ ಸಿನಿಮಾವು ಭಾರತವೊಂದರಲ್ಲೇ 212 ಕೋಟಿ ಗಳಿಸಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಸಿನಿಮಾ ಇನ್ನೂ ತೆರೆ ಕಂಡಿಲ್ಲ.

loader