ಒಂದಲ್ಲಾ ಎರಡಲ್ಲಾ ಪೋಸ್ಟರ್ ಬಂತು!

Ondalla Yaradalla poster launch
Highlights

'ರಾಮಾ ರಾಮಾ ರೇ' ಚಿತ್ರದ ನಂತರ ಯುವ ನಿರ್ದೇಶಕ ಸತ್ಯಪ್ರಕಾಶ್ ಆ್ಯಕ್ಷನ್ ಕಟ್ ಹೇಳಿರುವ 'ಒಂದಲ್ಲಾ ಎರಡಲ್ಲಾ' ಚಿತ್ರದ ಮೊದಲ ಪೋಸ್ಟರ್ ಲಾಂಚ್ ಆಗಿದೆ. ಕಪ್ಪು ಮನುಷ್ಯನ ಆಕೃತಿಯ ಈ ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. 

ಅವರವರ ಭಾವಕ್ಕೆ, ಅವರವರ ಭಕುತಿಗೆ  ತಕ್ಕಂತೆ ಈ ಚಿತ್ರ ಅರ್ಥವಾಗುತ್ತದೆ ಎನ್ನುವ ಸತ್ಯ ಪ್ರಕಾಶ್, ಮುಗ್ಧ ಮನಸ್ಸಿನವರಿಗೆ ಈ ಚಿತ್ರ ಇಷ್ಟವಾಗುತ್ತದೆ ಅಥವಾ ಈ ಚಿತ್ರ ನೋಡಿದ ಮೇಲೆ ಮುಗ್ಧ ಮನಸ್ಸಿನವರಾಗುತ್ತಾರೆ ಎನ್ನುತ್ತಾರೆ. 

ಉಮಾಪತಿ  ನಿರ್ಮಾಣದ ಈ ಚಿತ್ರದಲ್ಲಿ ಮಾಸ್ಟರ್ ರೋಹಿತ್, ಎಂ.ಕೆ. ಮಠ, ಸಾಯಿಕೃಷ್ಣ ಕುಡ್ಲ, ನಾಗಭೂಷಣ್ ನಟಿಸಿದ್ದಾರೆ. ಲವಿತ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ ಹಾಗೂ ವಾಸುಕಿ ವೈಭವ್ ಮತ್ತು ನಾಬಿನ್ ಪಾಲ್ ಸಂಗೀತ ಈ ಚಿತ್ರಕ್ಕಿದೆ.

loader