ಕನ್ನಡ ಪ್ರಭ ಅಂಕಣಕಾರ್ತಿ ಇದೀಗ ಸಿನಿಮಾದಲ್ಲಿ

Nivedita acting in Dunia Suri Movie
Highlights

‘ಪಾ ಪ್‌ಕಾರ್ನ್ ಮಂಕಿ ಟೈಗರ್’. ಇದು ದುನಿಯಾ ಸೂರಿ ಹೊಸ ಪಿಚ್ಚರ್. ‘ಟಗರು’ ಚಿತ್ರದಲ್ಲಿ ಚಿತ್ರಕತೆಯಲ್ಲೇ ಪ್ರಯೋಗ ಮಾಡಿದ ಸೂರಿ ಈ ಬಾರಿ ಹೆಸರಲ್ಲೇ ಪ್ರಯೋಗ ಮಾಡಿದ್ದಾರೆ. ರಿಯಲಿಸ್ಟಿಕ್ ಕತೆಗೆ ವಿಭಿನ್ನವಾದ ಟೈಟಲ್ ಇಟ್ಟಿದ್ದಾರೆ. ಈ ಚಿತ್ರದ ಮೂಲಕ ಸರ್ಪೈಸ್’ಗಳನ್ನೇ ನೀಡಬೇಕೆಂದು ನಿರ್ಧರಿಸಿರುವ ಸೂರಿ ತಮ್ಮ ಚಿತ್ರದ ಪ್ರಮುಖ ಪಾತ್ರಧಾರಿಗಳನ್ನು  ಘೋಷಣೆ ಮಾಡಿದ್ದಾರೆ. ಈ ಚಿತ್ರದ ನಾಯಕ ಪಾತ್ರವನ್ನು ಡಾಲಿ ಧನಂಜಯ್ ನಿರ್ವಹಿಸಿದರೆ ಚಿತ್ರದಲ್ಲಿ ನಾಯಕಿಯಾಗಿ ನಿವೇದಿತಾ  ಕಾಣಿಸಿಕೊಳ್ಳಲಿದ್ದಾರೆ.

‘ಪಾಪ್‌ ಕಾರ್ನ್ ಮಂಕಿ ಟೈಗರ್’. ಇದು ದುನಿಯಾ ಸೂರಿ ಹೊಸ ಪಿಚ್ಚರ್. ‘ಟಗರು’ ಚಿತ್ರದಲ್ಲಿ ಚಿತ್ರಕತೆಯಲ್ಲೇ ಪ್ರಯೋಗ ಮಾಡಿದ ಸೂರಿ ಈ ಬಾರಿ ಹೆಸರಲ್ಲೇ ಪ್ರಯೋಗ ಮಾಡಿದ್ದಾರೆ. ರಿಯಲಿಸ್ಟಿಕ್ ಕತೆಗೆ ವಿಭಿನ್ನವಾದ ಟೈಟಲ್ ಇಟ್ಟಿದ್ದಾರೆ. ಈ ಚಿತ್ರದ ಮೂಲಕ ಸರ್ಪೈಸ್’ಗಳನ್ನೇ ನೀಡಬೇಕೆಂದು ನಿರ್ಧರಿಸಿರುವ ಸೂರಿ ತಮ್ಮ ಚಿತ್ರದ ಪ್ರಮುಖ ಪಾತ್ರಧಾರಿಗಳನ್ನು ಘೋಷಣೆ ಮಾಡಿದ್ದಾರೆ.

ಈ ಚಿತ್ರದ ನಾಯಕ ಪಾತ್ರವನ್ನು ಡಾಲಿ ಧನಂಜಯ್ ನಿರ್ವಹಿಸಿದರೆ ಚಿತ್ರದಲ್ಲಿ ನಾಯಕಿಯಾಗಿ ನಿವೇದಿತಾ ಕಾಣಿಸಿಕೊಳ್ಳಲಿದ್ದಾರೆ.

‘ಶುದ್ಧಿ’ ಚಿತ್ರದಲ್ಲಿ ಮಿಂಚಿದ ನಿವೇದಿತಾ ಅನಂತರ ತುಂಬಾ ದಿನ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಮಧ್ಯೆ ‘ಕನ್ನಡಪ್ರಭ’ದಲ್ಲಿ ‘ಒಂಚೂರು ಆಕಾಶ’ ಅಂಕಣವನ್ನು ಬರೆಯುತ್ತಿದ್ದರು. ಈ ಅಂಕಣ ಜನಪ್ರಿಯವಾಗಿತ್ತು. ಅಲ್ಲದೇ ರಂಗಭೂಮಿಯಲ್ಲೂ ಸಕ್ರಿಯವಾಗಿದ್ದರು. ಇದೀಗ ಸೂರಿ ಚಿತ್ರದಲ್ಲಿ ನಟಿಸುವ ಮೂಲಕ ಅಭಿಮಾನಿ ಬಂಧುಗಳಿಗೆ ಖುಷಿ ನೀಡಿದ್ದಾರೆ ಮತ್ತು ಸ್ವತಃ ತಾವೂ ಖುಷಿಯಲ್ಲಿದ್ದಾರೆ. ಚಿತ್ರದ ಕುರಿತು
ಅವರು ಹೇಳುವುದಿಷ್ಟು: 

ಸೂರಿ ಸರ್, ಆಯ್ಕೆಯ ರೀತಿಯೇ ವಿಭಿನ್ನ. ಈಗ ಅವರ ಸಿನಿಮಾಕ್ಕೆ ನಾನು ನಾಯಕಿ ಆಗಿದ್ದು ನನ್ನ ಅದೃಷ್ಟ. ನಾನು ಆಯ್ಕೆ ಆಗಿದ್ದು ಹೇಗೋ ಗೊತ್ತಿಲ್ಲ. ಥಿ ಱಟಗರುೞ ಚಿತ್ರದ ಶೂಟಿಂಗ್ ಸಂದರ್ಭದ ವೇಳೆ, ಸೆಟ್‌ನಲ್ಲೇ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ. ಹೊಸ ಸಿನಿಮಾದ ಬಗ್ಗೆ ಆಗಲೇ ಪ್ರಸ್ತಾಪ  ಮಾಡಿದ್ದರು. ಆದ್ರೆ ನಾಯಕಿ ಆಯ್ಕೆಯ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ.

ಇತ್ತೀಚೆಗೆ ಒಮ್ಮೆ ಫೋನ್ ಮಾಡಿ, ಫೋಟೋ ಕಳುಹಿಸಲು ಹೇಳಿದ್ದರು. ಅವರ ಸೂಚನೆಯಂತೆ ಒಂದಷ್ಟು ಫೋಟೋ ಕಳುಹಿಸಿದ್ದೆ. ಒಂದು ವಾರ ಕಳೆದ ನಂತರ ಚಿತ್ರದಲ್ಲಿ ದೇವಿಕಾ ಹೆಸರಿನ ಪಾತ್ರ. ಅದು ನಿಮ್ಗೆ ಹೋಲಿಕೆ ಆಗುತ್ತೆ. ಚಿತ್ರೀಕರಣಕ್ಕೆ ರೆಡಿ ಆಗಿ ಅಂದ್ರು. ಖುಷಿ ಆಯಿತು.

ಶುದ್ಧಿ ಚಿತ್ರದ ನಂತರ ನಾನು ಖಾಲಿ ಕುಳಿತಿರಲಿಲ್ಲ. ಸಾಕಷ್ಟು ಆಫರ್ ಬಂದಿವೆ. ಆದ್ರೆ ಅಲ್ಲಿ ನಂಗಿಷ್ಟವಾದ ಪಾತ್ರಗಳು ಸಿಗದ ಕಾರಣ ಯಾವುದನ್ನು ಒಪ್ಪಿಕೊಂಡಿರಲಿಲ್ಲ.

ಸಿನಿಮಾದಲ್ಲಿ ಸದಾ ಬ್ಯುಸಿ ಆಗಿರಬೇಕು ಅನ್ನೋದು ನನ್ನ ಸಿದ್ಧಾಂತವಲ್ಲ. ಟ್ರಾವೆಲ್ ನನ್ನ ಹುಚ್ಚು. ಅಲ್ಲಿ ಬ್ಯುಸಿ ಆಗಿದ್ದೆ. ಒಂದು ತಿಂಗಳು ನಾರ್ತ್ ಈಸ್ಟ್ ರಾಜ್ಯಗಳಲ್ಲಿ ಪ್ರವಾಸ ಮಾಡಿದೆ. ಕಲಿಕೆ ಅನ್ನೋದು ಅಲ್ಲೂ ಇರುತ್ತೆ. ಸಾಕಷ್ಟು ಕಲಿತಿದ್ದೇನೆ.   

loader