ಬೆಂಗಳೂರು(ನ.26): ದಕ್ಷಿಣ ಭಾರತದ ಪ್ರಸಿದ್ಧ ನಟಿ ನಿತ್ಯಾ ಮೆನನ್‌ ತೆಲುಗು ಸಿನಿಮಾದ ಘಟನಾ ಚಿತ್ರದ ನಿರ್ದೇಶಕರ ಮೇಲೆ ಗರಂ ಆಗಿದ್ದಾರೆ.

ಕಾಮಿಡಿ ಥ್ರಿಲ್ಲರ್ ಕಥೆ ಆಧರಿಸಿರೋ ಘಟನಾ ಚಿತ್ರದಲ್ಲಿ , ನಿತ್ಯಾ ಮೆನನ್ ಮೇಲೆ ವಿಲನ್ ಪಾತ್ರಧಾರಿ ಅತ್ಯಾಚಾರ ಮಾಡುವ ಸನ್ನಿವೇಶವಿರುತ್ತದೆ.  ಈ ಸನ್ನಿವೇಶವನ್ನ ನಿರ್ದೇಶಕರು  ಕೆಟ್ಟದಾಗಿ ತೋರಿಸಿದ್ದಾರೆ ಅಂತ ನಿತ್ಯಾ ಮೆನನ್ ನಿರ್ದೇಶಕರ ವಿರುದ್ಧ  ಗರಂ ಆಗಿದ್ದಾರೆ. ಆದರೆ ನಿರ್ದೇಶಕರು ಮಾತ್ರ ನಿತ್ಯಾ ಮೆನನ್ ಮಾತಿಗೆ ತಲೆಕೆಡಿಸಿಕೊಂಡಿಲ್ಲ ಅನ್ನೋದು ವಿಪರ್ಯಾಸ.