ಅಮೆರಿಕದ ರಾಯಭಾರಿಯಾಗಿ ಜಾಗತಿಕ ಮಟ್ಟದಲ್ಲಿ ಅಮೆರಿಕದ ದನಿ ಎನ್ನಿಸಿಕೊಂಡಿದ್ದ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರು ಮಂಗಳವಾರ ಹಠಾತ್‌ ರಾಜೀನಾಮೆ ನೀಡಿದ್ದಾರೆ. ಇದರಿಂದ ಡೊನಾಲ್ಡ್‌ ಟ್ರಂಪ್‌ ಆಡಳಿತಕ್ಕೆ ಭಾರಿ ಹಿನ್ನಡೆಯಾಗಿದೆ.

ವಾಷಿಂಗ್ಟನ್‌: ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ಜಾಗತಿಕ ಮಟ್ಟದಲ್ಲಿ ಅಮೆರಿಕದ ದನಿ ಎನ್ನಿಸಿಕೊಂಡಿದ್ದ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರು ಮಂಗಳವಾರ ಹಠಾತ್‌ ರಾಜೀನಾಮೆ ನೀಡಿದ್ದಾರೆ. ಇದರಿಂದ ಡೊನಾಲ್ಡ್‌ ಟ್ರಂಪ್‌ ಆಡಳಿತಕ್ಕೆ ಭಾರಿ ಹಿನ್ನಡೆಯಾಗಿದೆ.

Add Asianetnews Kannada as a Preferred SourcegooglePreferred

ಟ್ರಂಪ್‌ ಅವರ ಜತೆ ಓವಲ್‌ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ನಿಕ್ಕಿ ಹ್ಯಾಲೆ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಹ್ಯಾಲೆ 2020ಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಗುಸುಗುಸು ಎದ್ದುತ್ತು. ಆದರೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘ನಾನು ಚುನಾವಣೆಗೆ ನಿಲ್ಲುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಟ್ರಂಪ್‌ ಪರ ಪ್ರಚಾರ ಮಾಡುವೆ’ ಎಂದರು.

‘ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುವ ಬಗ್ಗೆ 6 ತಿಂಗಳ ಹಿಂದೆಯೇ ನಿಕ್ಕಿ ನನ್ನೆದುರು ಇರಾದೆ ವ್ಯಕ್ತಪಡಿಸಿದ್ದರು. ಇದನ್ನು ಈಗ ನಾನು ಒಪ್ಪಿಕೊಂಡಿದ್ದು, ವರ್ಷದ ಅಂತ್ಯದವರೆಗೆ ಮುಂದುವರಿಯಿರಿ ಎಂದು ಸೂಚಿಸಿದ್ದೇನೆ. 3 ವಾರದಲ್ಲಿ ಅವರ ಉತ್ತರಾಧಿಕಾರಿ ಆಯ್ಕೆ ಮಾಡುವೆ. ಅನೇಕರು ಈ ಹುದ್ದೆ ವಹಿಸಿಕೊಳ್ಳಲು ಮುಂದಾಗಿದ್ದಾರೆ’ ಎಂದು ಟ್ರಂಪ್‌ ಹೇಳಿದರು.

‘ನಿಕ್ಕಿ ಅವರನ್ನು ನಾನು ಮಿಸ್‌ ಮಾಡಿಕೊಳ್ಳುವೆ. ಆದರೆ ಅವರು ಸದಾ ನಮಗೆ ಸಲಹೆ-ಸೂಚನೆ ನೀಡಿಕೆ ಮುಂದುವರಿಸಲಿದ್ದಾರೆ. ಅವರು ಕೆಲಸಕ್ಕೆ ಮರಳುವ ಇರಾದೆ ವ್ಯಕ್ತಪಡಿಸಿದರೆ ಅವರಿಗೆ ಇಷ್ಟವಾದ ಹುದ್ದೆ ಕೊಡುವೆ’ ಎಂದು ಟ್ರಂಪ್‌ ತಿಳಿಸಿದರು.