ಮುನಿಸು ಮರೆತು ಒಂದಾದ ಕುಚಿಕೋ ಗೆಳೆಯರು | ಅಭಿಷೇಕ್ ಅಮರ್ ಗೆಲುವಿಗೆ ನಿಖಿಲ್ ಕುಮಾರಸ್ವಾಮಿ ವಿಶ್ | ಸುಮಲತಾ ಗೆಲುವಿಗೂ ವಿಶ್ 

ರಾಜಕೀಯದಲ್ಲಿ ಕಿತ್ತಾಟ, ಕೆಸರೆರಚಾಟಗಳೆಲ್ಲಾ ಕಾಮನ್. ರಾಜಕೀಯ ಅಖಾಡದಲ್ಲಿ ಸ್ನೇಹಿತರು ಶತ್ರುಗಳಾಗ್ತಾರೆ. ಮಂಡ್ಯ ಚುನಾವಣಾ ಅಖಾಡವೂ ಇದಕ್ಕೆ ಹೊರತಾಗಿರಲಿಲ್ಲ. ಅಭಿಷೇಕ್ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರು. ಆದರೆ ಮಂಡ್ಯ ಚುನಾವಣೆಯಲ್ಲಿ ಇಬ್ಬರೂ ಪ್ರತಿಸ್ಪರ್ಧಿಗಳಾದರು. 

ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಯಶಸ್ಸಿಗೆ ನಿಖಿಲ್ ಕುಮಾರಸ್ವಾಮಿ ವಿಶ್ ಮಾಡಿದ್ದಾರೆ. ರಾಜಕೀಯಕ್ಕಿಂತ ನನಗೆ ಸಂಬಂಧ ಬಹಳ ಮುಖ್ಯ. ನಾನದಕ್ಕೆ ಗೌರವ ಕೊಡುತ್ತೇನೆ. ಸುಮಕ್ಕ ಗೆಲುವಿಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 

ಮಂಡ್ಯ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ನನ್ನ ಸೋಲಿಗೆ ಯಾರೂ ಕಾರಣಕರ್ತರಲ್ಲ. ನನ್ನ ಸೋಲಿಗೆ ನಾನೇ ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ. 

View post on Instagram

ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಈ ಚುನಾವಣೆಯಿಮದ ಸಾಕಷ್ಟು ಕಲಿತಿದ್ದೇನೆ. ನೀವು ನನ್ನನ್ನು ಗಂಭೀರ ರಾಜಕಾರಣಿ ಎಂದು ಪರಿಗಣಿಸುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ನಮ್ಮ ಪಕ್ಷದ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಮ್ಮ ಪಕ್ಷವನ್ನು ಅಭಿವೃದ್ಧಿಪಡಿಸಲು ಯತ್ನಿಸುತ್ತೇನೆ ಎಂದಿದ್ದಾರೆ.