ಕಳೆದ ವರ್ಷ ಬ್ಯಾಚುಲರ್ ಆಗಿದ್ದ ಯಶ್ ರಾಧಿಕ ಹೊಸ ವರ್ಷಕ್ಕೆ ಸಂಸಾರಿಗಳಾಗಿದ್ದಾರೆ. ಇದೇ ಖುಷಿಯಲ್ಲಿ ಒಟ್ಟಾಗಿ ನಿಂತು ಹೊಸವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಫೋಟೋ ಒಂದನ್ನು ಟ್ವಿಟರ್'ಗೆ ಅಪ್'ಲೋಡ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ 'ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. ನಿಮ್ಮ ರಾಮಾಚಾರಿ ಈ ವರ್ಷದಿಂದ ಸಂಸಾರಿ' ಎಂದು ಸಂದೇಶವನ್ನೂ ಬರೆದಿದ್ದಾರೆ.
ಬೆಂಗಳೂರು(ಜ.02): 2016ರ ಡಿಸೆಂಬರ್'ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸ್ಯಾಂಡಲ್'ವುಡ್ ಜೋಡಿ ಯಶ್ ರಾಧಿಕಾ ಮದುವೆಗೆ ಎಲ್ಲರೂ ಹರಸಿ ಹಾರೈಸಿದ್ದರು. ಅದ್ಧೂರಿಯಾಗಿ ಮದುವೆಯಾದ ಈ ತಾರಾ ಜೋಡಿಯನ್ನು ಕಂಡು ಅಭಿಮಾನಿಗಳು ಸಂತಸಪಟ್ಟಿದ್ದರು. ಇನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಯಶ್ ಈ ಹೊಸ ವರ್ಷ 2017ಕ್ಕೆ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.