'ಕಮಲಿ...' ಝೀ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅದೇ ರೀತಿಯ ಪಾತ್ರವೊಂದು ಮತ್ತೊಂದು ಧಾರಾವಾಹಿ ಮೂಲಕ ನಿಮ್ಮ ಮನೆಗೆ ಬರುತ್ತಿದ್ದಾಳೆ...

ಝೀ ಕನ್ನಡದಲ್ಲಿ ಮುದ್ದು ಗೊಂಬೆಯಂತೆ ಕಂಗೊಳಿಸಿ, ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ 'ಕಮಲಿ'ಯ ಹೊಸ ಅವತಾರದಂತೆ ಮತ್ತೊಂದು ಧಾರಾವಾಹಿ ಬರಲಿದೆ. ಮತ್ತೊಂದು ಹಳ್ಳಿ ಪಾತ್ರವನ್ನು ಪರಿಚಯಿಸುತ್ತಿದ್ದು, ಕಮಲಿಯಂತೆ 'ಪಾರು' ಸಹ ಎಲ್ಲರ ಹೃದಯ ಗೆಲ್ಲುತ್ತಾಳಾ ಕಾದು ನೋಡಬೇಕು... ಸಿರಿವಂತರಿಗೇ ಸವಾಲು ಹಾಕಿ ನಿಲ್ಲುವ ಗಟ್ಟಿಗಿತ್ತಿ, ಹಳ್ಳಿಯವಳು ಪಾರು.

ಝೀ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಅವರ ನಿರ್ಮಾಣದಲ್ಲಿ ಮೂಡುವ ಎಲ್ಲ ಪಾತ್ರಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಇದು ಎಲ್ಲರ ಮನ ಗೆಲ್ಲುವಲ್ಲಿ ಅನುಮಾನವೇ ಇಲ್ಲ. ವಿಭಿನ್ನ ಪಾತ್ರಗಳು ಹಾಗೂ ಕಲಾವಿದರ ಮೂಲಕ ವಿಶೇಷ ಧಾರಾವಾಹಿ ಹೆಣೆಯುವುದರಲ್ಲಿ ಝೀ ಬಳಗ ಎತ್ತಿದ ಕೈ.

ಇದೇ ಧಾರಾವಾಯಿಲ್ಲಿ ಬಹುಭಾಷಾ ತಾರೆ ವಿನಯಾ ಪ್ರಸಾದ್ ಅಖಿಲಾಂಡೇಶ್ವರಿ ಎಂಬ ಸಿರಿವಂತ ವಿಲನ್ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಪಾರು ಚಿಕ್ಕ ಹಳ್ಳಿಯ ಹುಡುಗಿಯಾಗಿ ಜೀವನದಲ್ಲಿ ಪ್ರೀತಿ ಎಂದರೇನು ಎಂದು ಎಲ್ಲರಿಗೂ ತಿಳಿಸಿ, ಎಲ್ಲವನ್ನೂಸ್ವತಂತ್ರವಾಗಿ ನಿಭಾಯಿಸುವ ಗಟ್ಟಿ ಹೆಣ್ಣು.

ಬೆಳ್ಳಿತೆರೆಯಲ್ಲಿಯೇ ಮೊದಲೆನ್ನುವ ಹೈ ಬಜೆಟ್ ಧಾರಾವಾಹಿ ಇದಾಗಿದ್ದು, ಲಲಿತ್ ಮಹಲ್ ಅರಮನೆಯಲ್ಲಿ ಚಿತ್ರೀಕರಣವಾಗಿದೆ. ಈ ಧಾರವಾಹಿ ಎಲ್ಲ ಮಹಿಳೆಯರ ಆಲೋಚನಾ ಭಾವವನ್ನೇ ಬದಲಾಯಿಸಿಬಹುದೆಂಬ ನಿರೀಕ್ಷೆ ಹುಟ್ಟಿಸಿದೆ. ಡಿಸೆಂಬರ್ 3 ರಿಂದ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.

View post on Instagram