ಒಗ್ಗರಣೆ ಡಬ್ಬಿ ಕಾರ್ಯಕ್ರಮದ ಮೂಲಕ ಖ್ಯಾತಿ ಗಳಿಸಿದ್ದ ನಟ ಮುರಳಿ ಈಗ ಇನ್ನೊಂದು ಹೊಸ ಶೋನೊಂದಿಗೆ ಪ್ರೇಕ್ಷಕರ ಮುಂದೆ ಬರಲು ನಿರ್ಧರಿಸಿದ್ದಾರೆ. 

ಕಲರ್ಸ್ ಸೂಪರ್ ನಲ್ಲಿ ಸೂಪರ್ ದಂಪತಿ ಎನ್ನುವ ಹೊಸದೊಂದು ಶೋ ಆರಂಭವಾಗಲಿದೆ. ಇದರ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. 

ಈ ಶೋ ರೂಪುರೇಷೆಗಳು, ನಿಯಮಗಳು ಹೇಗಿರುತ್ತದೆ ಎಂದು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಶೋನಲ್ಲಿ ಭಾಗವಹಿಸಬೇಕೆಂದರೆ ವೂಟ್ ಆ್ಯಪ್ ನಲ್ಲಿ ರಿಜಿಸ್ಟರ್ ಆಗಬೇಕು ಎಂದು ಪ್ರೋಮೋದಲ್ಲಿ ಹೇಳಲಾಗಿದೆ.