ತನಗೆ ಈ ನಿರ್ದೇಶಕನೊಂದಿಗೆ ಸಂಬಂಧವಿರುವುದು ನಿಜ ಎಂದ ಬೆಂಗಳೂರು ಮೂಲದ ನಟಿ

Nayanthara confirms relationship with director Vignesh Shivn
Highlights

ಸುದ್ದಿಮಾಧ್ಯವೊಂದು ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಚೆನ್ನೈ(ಮಾ.24): ಬೆಂಗಳೂರು ಮೂಲದ ನಟಿ ನಯನತಾರ ತಮ್ಮ ಖಾಸಗಿ ಸಂಬಂಧದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ನಿರ್ದೇಶಕ, ಸಾಹಿತಿ ಹಾಗೂ ನಟ ವಿಘ್ನೇಶ್ ಶಿವಾನಿಯ ಜೊತೆ ನನಗೆ ಸಂಬಂಧವಿದೆ. ಇಬ್ಬರು ರಜೆಯ ಮೋಜು ಅನುಭವಿಸುತ್ತಿರುವ ಚಿತ್ರಗಳು ಆನ್'ಲೈನ್'ನಲ್ಲಿ ಹರಿದಾಡುತ್ತಿವೆ. ಸುದ್ದಿಮಾಧ್ಯವೊಂದು ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಇನ್ನು ಮುಂದೆ ವಿಘ್ನೇಶ್'ನನ್ನು ಭಾವಿಪತಿ ಎಂದು ಕರೆಯಿರಿ ಎಂದು ನಟಿ ತಿಳಿಸಿದ್ದಾಳೆ. ಇಬ್ಬರೂ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರಿಬ್ಬರು ಒಟ್ಟಿಗೆ ಅಮೆರಿಕಾಕ್ಕೆ ಒಂದು ತಿಂಗಳು ಪ್ರವಾಸಕ್ಕೆ ತೆರಳಿದ್ದರು. ಕನ್ನಡದ ಸೂಪರ್ ಸೇರಿದಂತೆ ಹಲವು ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ಕೆಲ ವರ್ಷಗಳ ಹಿಂದೆ ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ್ ಅವರನ್ನು ವಿವಾಹವಾಗಿದ್ದ ನಟಿ ಕೆಲವೇ ತಿಂಗಳಲ್ಲಿಯೇ ಸಂಬಂಧ ಕಳಚಿಕೊಂಡಿದ್ದಳು.

loader