ಬೆಂಗಳೂರು(ಸೆ.19): ಸಾಹಸ ಸಿಂಹ ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ನಿನ್ನೆ ನಾಗರಹಾವು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅನಿಮೇಷನ್ ನಲ್ಲಿ ವಿಷ್ಣು ದಾದಾಗೆ ಜೀವ ನೀಡಲಾಗಿದ್ದು, ಮತ್ತೆ ವಿಷ್ಣು ಕಣ್ಮುಂದೆ ಬಂದ ಹಾಗಿದೆ ಎಂದರೆ ತಪ್ಪಾಗುವುದಿಲ್ಲ.
ನಾಗರಹಾವು ಚಿತ್ರದ ಅದ್ದೂರಿ ಮೇಕಿಂಗ್ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದ್ದು, ಗ್ರಾಫಿಕ್ಸ್ ಗಳು ತೆಲುಗಿನ ಮಗಧೀರ ಬಾಹುಬಲಿಯನ್ನು ಮೀರಿಸಲಿದೆ ಎಂದರೆ ತಪ್ಪಾಗುವುದಿಲ್ಲ. ದರ್ಶನ್, ರಮ್ಯಾ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿ ಚಿತ್ರದಲ್ಲಿ ವಿಷ್ಣು ಕಾಣಿಸಿಕೊಂಡಿರುವ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದ್ದು, ಇದು ವಿಷ್ಣು ಅಭಿಮಾನಿಗಳಿಗೆ ಸಂತಸ ತಂದಿದೆ.
