ಬೆಂಗಳೂರು(ಆ. 17) ಹೆಸರಾಂತ ಗಾಯಕಿ ನಾಗಚಂದ್ರಿಕಾ ಭಟ್  ಹೊಸದೊಂದು ಪ್ರಯೋಗ ಮಾಡಿದ್ದಾರೆ. ಇನ್ನು ಮುಂದೆ ಯೂ ಟ್ಯೂಬ್ ಮೂಲಕ ಬಹಳ ಸುಲಭವಾಗಿ ನಮ್ಮ ಕಿವಿ ತಲುಪಲಿದ್ದಾರೆ.

ದೇಶದ 74ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ 'ಗಾನಚಂದ್ರಿಕಾ ಕಲ್ಚರಲ್ ಫೌಂಡೇಶನ್' ತನ್ನ ಯೂಟ್ಯೂಬ್ ಚಾನಲ್‌ಗೆ ವಿಧ್ಯುಕ್ತ ಚಾಲನೆ ನೀಡಿದೆ.

ಕನ್ನಡದ 62  ದಿಗ್ಗಜ ಗಾಯಕರು ಒಂದೇ ವೇದಿಕೆಯಲ್ಲಿ

ಸ್ವಾತಂತ್ರ್ಯ ದಿನಕ್ಕೆ ಅನ್ವರ್ಥವಾಗುವಂತೆ ಸಂಸ್ಥೆಯ ಸಂಸ್ಥಾಪಕಿ ನಾಗಚಂದ್ರಿಕಾ ಭಟ್, ಅವರ ಮಕ್ಕಳಾದ ಮಾ.ಅರ್ಣವ ಭಟ್ ಹಾಗೂ ಮಾ.ಅಚಿಂತ್ಯ ಭಟ್ ಹಾಡಿರುವ 'ನದ ನದಿಗಳ ಗಿರಿವನಗಳ ನಾಡೇ' ಎಂಬ ದೇಶಭಕ್ತಿಗೀತೆಯನ್ನು ಚಾನಲ್‌ನ ಮೊದಲ ಗೀತೆಯಾಗಿ ಅಪ್‌ಲೋಡ್ ಮಾಡಲಾಗಿದೆ.

ಇದೇ ರೀತಿ, ನಾಡಿನ ಕಲೆ, ಸಂಗೀತ, ಸಂಸ್ಕೃತಿಗೆ ಸಂಬಂಧಿಸಿದ ಇನ್ನಷ್ಟು ದೃಶ್ಯಾವಳಿಗಳು ಈ ಚಾನಲ್‌ನಲ್ಲಿ ಬಿತ್ತರಗೊಳ್ಳಲಿವೆ.