Asianet Suvarna News Asianet Suvarna News

ಸೀರಿಯಲ್ ಲೋಕದಲ್ಲಿ ಜೋರಾಗಿದೆ ಪೌರಾಣಿಕ ಧಾರಾವಾಹಿಗಳ ಅಬ್ಬರ

ಸೀರಿಯಲ್ ಲೋಕದಲ್ಲಿ ಹೆಚ್ಚಾಗ್ತಾ ಇದೆ ಪೌರಾಣಿಕ ಧಾರಾವಾಹಿಗಳ ಅಬ್ಬರ | ಜನರ ಮನ ಗೆದ್ದಿದೆ ಪೌರಾಣಿಕ ಧಾರಾವಾಹಿಗಳು | ಯಾವ್ಯಾವ ವಾಹಿನಿಯಲ್ಲಿ ಯಾವ್ಯಾವ ಧಾರಾವಾಹಿಗಳು ಬರುತ್ತಿವೆ ಇಲ್ಲಿದೆ ಮಾಹಿತಿ. 

Mythological serials coming more and more in serial world
Author
Bengaluru, First Published Oct 4, 2018, 3:59 PM IST
  • Facebook
  • Twitter
  • Whatsapp

ಬೆಂಗಳೂರು (ಅ. 04): ಸೀರಿಯಲ್ ಲೋಕದಲ್ಲಿ ಪೌರಾಣಿಕ ಧಾರಾವಾಹಿಗಳ ಅಬ್ಬರ ಹೆಚ್ಚಾಗಿದೆ. ಎಲ್ಲಾ ವಾಹಿನಿಗಳಲ್ಲೂ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿದೆ.  

ಕಲರ್ಸ್ ಕನ್ನಡದಲ್ಲಿ ಶನಿವಾರ, ಭಾನುವಾರ ರಾತ್ರಿ  8 ಗಂಟೆಗೆ ಪ್ರಸಾರವಾಗಲಿದೆ. ಪ್ರತಿದಿನ ರಾತ್ರಿ 8. 30 ಕ್ಕೆ ಶನಿ ಧಾರಾವಾಹಿ ಪ್ರಸಾರವಾಗುತ್ತದೆ. ಇದು ಎಲ್ಲರ ಮನಸ್ಸನ್ನು ಗೆದ್ದಿದೆ. ಜೀ ಕನ್ನಡ ವಾಹಿನಿಯಲ್ಲಿ  ಶನಿವಾರ ಹಾಗೂ ಭಾನುವಾರ ಸಂಜೆ 6.30 -7. 30 ರವರೆಗೆ ಪ್ರಸಾರವಾಗಲಿದೆ.  

ಅದೇ ರೀತಿ ಅಕ್ಟೋಬರ್ 8 ರಿಂದ ಪ್ರತಿ ದಿನ ರಾತ್ರಿ 7.30 ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಯ ಹೆಸರು ‘ಜೈ ಹನುಮಾನ್’.  ಈ ಧಾರಾವಾಹಿಯಲ್ಲಿ ಪ್ರದ್ಯುಮ್ನ, ಪ್ರಿಯಾಂಕಾ ಚಿಂಚೋಳಿ, ಪ್ರಸನ್ನ, ಮಧು, ವಿನಯ್‌ಗೌಡ, ರಂಜಿತಾ ಸೂರ್ಯವಂಶಿ, ನಾಗಶ್ರೀ ನಟಿಸುತ್ತಿದ್ದಾರೆ.

ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಬುಕ್ಕಾಪಟ್ಟಣ ವಾಸು ಈ ಧಾರಾವಾಹಿ ನಿರ್ದೇಶಕರು. ಬಲ ಸುರೇಶ್ ಜೈ ಹನುಮಾನ್‌ಗೆ ಸಂಭಾಷಣೆ ಬರೆಯುತ್ತಿದ್ದಾರೆ.  

Follow Us:
Download App:
  • android
  • ios