ನವದೆಹಲಿ[ಫೆ.10]: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಚಿತ್ರ ನಿರ್ಮಾಣ ಆಗುತ್ತಿರುವ ಸಂದರ್ಭದಲ್ಲೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕುರಿತ ಚಿತ್ರವೊಂದು ಲೋಕಸಭೆ ಚುನಾವಣೆಗೂ ಮುನ್ನ ತೆರೆ ಕಾಣಲಿದೆ.

ರಾಹುಲ್ ಗಾಂಧಿ ಅವರ ವೈಯಕ್ತಿಕ ಬದುಕು ಮತ್ತು ರಾಜಕೀಯ ಜೀವನ ಆಧಾರಿತ ಚಿತ್ರಕ್ಕೆ ‘ಮೈ ನೇಮ್ ಇಸ್ ರಾಗಾ’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಚಿತ್ರವನ್ನು ‘ಕಾಮಸೂತ್ರ 3ಡಿ’ ಚಿತ್ರದ ನಿರ್ದೇಶಕ ರುಪೇಶ್ ಪಾಲ್ ಅವರು ನಿರ್ದೇಶಿಸಲಿದ್ದಾರೆ.

ಚಿತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ವೈಭವೀಕರಿಸುವ ಉದ್ದೇಶ ಇಲ್ಲ. ಪದೇ ಪದೆ ಟೀಕೆಗೆ ಒಳಗಾಗುವ ವ್ಯಕ್ತಿಯೊಬ್ಬ ಅವುಗಳಿಂದ ಹೊರಬುರುವ ಕಥಾ ಹಂದರವನ್ನು ಹೊಂದಿದೆ ಎಂದು ಪೌಲ್ ಹೇಳಿದ್ದಾರೆ.