Asianet Suvarna News Asianet Suvarna News

ಸಾವಿನ ಮನೆಯಲ್ಲಿ ಹಾಡಿ ಬಿಗ್ ಬಾಸ್ ಬಂದ ಮಂಡ್ಯ ಹುಡುಗ

ಸಾವಿನ ಮನೆಯಲ್ಲಿ ಹಾಡು ಹೇಳಿ ಸದ್ಯ ಸ್ಯಾಂಡಲ್ ವುಡ್ ಸ್ಟಾರ್ ನಟರ ಸಿನಿಮಾಗೆ ಹಾಡು ಹೇಳುತ್ತಿರುವ ನವೀನ್ ಸಜ್ಜು ಅಸಲಿ ಕಥೆ ಇಲ್ಲಿದೆ ನೋಡಿ.

Music director Naveen Sajju enter Bigg Boss kannada season 6
Author
Bengaluru, First Published Oct 28, 2018, 1:18 PM IST
  • Facebook
  • Twitter
  • Whatsapp

ಲೂಸಿಯಾ ಚಿತ್ರದ ಹಾಡಿಗೆ ಫುಲ್ ಫಿದಾ ಆಗಿರೋ ಜನ ಅದರ ಹಿಂದಿನ ಮುಖ ಹಿನ್ನೆಲೆ ಕೇಳಿದರೆ ಅಬ್ಬಾ... ಅನ್ನೋದಂತು ಖಚಿತ.

ಅಷ್ಟಕ್ಕೂ ಸಂಗೀತದ ಕ್ಲಾಸ್ಗೆ ಹೋಗಿ ಹಾಡು ಕಲಿತವರು ಇವರಲ್ಲ, ಮಂಡ್ಯದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಕೊಟ್ಟವರು.

ಬಿಗ್ ಬಾಸ್ ಮನೆಗೆ ಬರ್ತಾನೆ, ತಾನು ಚೂರು ಉಡಾಫೆ ಹಾಗು ಜಾಸ್ತಿ ವಿಶಾಲ ಮನಸ್ಸಿನ ಹುಡುಗ ಎಂದು ಹೇಳಿಕೊಂಡು ಬಂದಿದ್ದಾರೆ. ಈ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಹುಡುಗ ಹಾಡಲು ಶುರು ಮಾಡಿದ್ದು ಸಾವಿನ ಮನೆಯಿಂದ.

ಚಿಕ್ಕ ವಯಸ್ಸಿನಲ್ಲಿದ್ದಾಗ ತನ್ನ ಊರಿನಲ್ಲಾಗುತ್ತಿದ ಸಾವಿನ ಮನೆ ಹರಿಕಥೆ ನೋಡಿ ಹಾಡಿ ಬೆಳೆದರು. ಅಷ್ಟೇ ಅಲ್ಲದೆ ನಾಟಕದಲ್ಲೂ ಕೂಡ ಹಾಡಿನ ಛಾಪು ಮೂಡಿಸುತ್ತಿದ್ದರು.

ಊರು ಊರು ತಿರುಗಿ ಆರ್ಕೆಸ್ಟ್ರಾದಲ್ಲಿ ಹಾಡು ಹೇಳುವಾಗ ನವೀನ್ ಸಿನಿಮಾ ನಿರ್ದೇಶಕರಾದ ಪವನ್ ಕುಮಾರ್ ಕೈಗೆ ಸಿಕ್ಕಿದ್ದರು. ಅಲ್ಲಿಂದ ಶುರುವಾದದ್ದು ಅವರ ಸಿನಿ ಜರ್ನಿ. ಅಲ್ಲದೇ ನವೀನ್ ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಎಂದ್ರೆ ಮೊದಲ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದಾದ ನಂತರ 120ಕ್ಕೂ ಹೆಚ್ಚಿನ ಸಿನಿಮಾದಲ್ಲಿ ಹಾಡಿದ್ದಾರೆ. ಕಳೆದ ಸೀಸನ್ ಬಿಗ್ ಬಾಸ್ ನಲ್ಲಿ ಚಂದನ್ ಶೆಟ್ಟಿ ಎಲ್ಲರನ್ನು ರಂಜಿಸಿದ್ರೆ ಈಗ ನವೀನ್ ಕೂಡ ಹಾಗೆ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡ್ತಾರ ಎನ್ನೋದನ್ನು ಕಾದು ನೊಡಬೇಕಿದೆ.

Follow Us:
Download App:
  • android
  • ios