ಕಳೆದ ವಾರವಷ್ಟೇ ಉಪೇಂದ್ರ ಹಾಗೂ ಸುದೀಪ್ ನಡನೆಯಲ್ಲಿ 'ಮುಕುಂದ ಮುರಾರಿ' ಸಿನಿಮಾ ತೆರೆಗೆ ಬಂತು. ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಈ ಚಿತ್ರದಲ್ಲಿ ಸುದೀಪ್ ಮುರಾರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ದೇವರನ್ನು ಬಯ್ಯುವ ನಾಸ್ತಿಕನ ಮನೆಗೆ ಬರುವ ಕೃಷ್ಣ ಪಾತ್ರ ಸುದೀಪ್ ಅವರದ್ದು. ಹೀಗೆ ದೇವಲೋಕದಿಂದ ಭೂಲೋಕಕ್ಕೆ ಬರುವ ಮುರಾರಿಗೆ ಚಿತ್ರದಲ್ಲಿ ವಿಶೇಷವಾದ ಬೈಕನ್ನು ಸಿದ್ಧ ಮಾಡಲಾಗಿತ್ತು. ಇದೇ ಬೈಕ್ ಈಗ ಹರಾಜಿಗಿದೆ!. ಉಪೇಂದ್ರ-ಸುದೀಪ್ ಜಂಟೊಯಾಗಿ ಹರಾಜಿಗಿಟ್ಟಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಚಿತ್ರಮಂದಿರದ ಮುಂಭಾಗದಲ್ಲಿ ಈಗಾಗಲೇ ಈ ವಿಶೇಷ ಬೈಕನ್ನು ಪ್ರದರ್ಶನಕ್ಕಿಡಲಾಗಿದ್ದು, ಇದೇ ತಿಂಗಳಿನ 11ಕ್ಕೆ ಹರಾಜು ನಡೆಯಲಿದೆ. ವಿಶೇಷವಾಗಿ ಸುದೀಪ್'ಗಾಗಿಯೇ ಈ ಬೈಕನ್ನು ವಿನ್ಯಾಸ ಮಾಡಲಾಗಿತ್ತು. 35 ದಿನಗಳ ಅವಧಿಯಲ್ಲಿ 'ಮುಂಬೈ ಶಾಪರ್ಸ್' ಕಂಪೆನಿ ಇದನ್ನು ತಯಾರಿಸಿತ್ತು. 'ಚಿತ್ರದಲ್ಲಿನ ಸುದೀಪ್ ಪಾತ್ರ ಮತ್ತು ಬೈಕ್'ಗಳ ಮೇಲಿನ ಕಿಚ್ಚನ ಪ್ರೀತಿಯ ಬಗ್ಗೆ ಮುಂಬೈ ಕಂಪೆನಿಗೆ ವಿವರಿಸಿದ್ದೆವು. ನಮ್ಮ ಕಲ್ಪನೆಗಿಂತಲೂ ಚೆನ್ನಾಗಿ ಈ ಬೈಕನ್ನು ತಯಾರಿಸಲಾಗಿದೆ' ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್.
ಬೆಂಗಳೂರು(ಅ.02): ಶ್ರೀ ಕೃಷ್ಣ ಪರಮಾತ್ಮ ಓಡಿಸಿದ ಬೈಕ್ ಈಗ ಭೂಲೋಕದಲ್ಲಿ ಹರಾಜಿಗಿದೆ!. ನಂಬಿ ಇದು ನಿಜ, ಈ ವಿಶೇಷ ವಾಹನವನ್ನು ಸ್ವತಃ ಶ್ರೀ ಕೃಷ್ಣನೇ ಹರಾಜಿಗಿಟ್ಟಿದ್ದಾನೆ!. 'ಅಂತೂ ಈ ಭೂಲೋಕ ದೇವರ ವಾಹನಗಳನ್ನು ಹರಾಜಿಗಿಟ್ಟಿತೇ? ಎಂಥ ಕಾಲ ಬಂತಪ್ಪಾ!' ಎಂದುಕೊಳ್ಳಬೇಡಿ. ಯಾಕೆಂದರೆ ಇದು ರೀಲ್ ದೇವರು! ಕಳೆದ ವಾರವಷ್ಟೇ ಉಪೇಂದ್ರ ಹಾಗೂ ಸುದೀಪ್ ನಡನೆಯಲ್ಲಿ 'ಮುಕುಂದ ಮುರಾರಿ' ಸಿನಿಮಾ ತೆರೆಗೆ ಬಂತು. ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಈ ಚಿತ್ರದಲ್ಲಿ ಸುದೀಪ್ ಮುರಾರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ದೇವರನ್ನು ಬಯ್ಯುವ ನಾಸ್ತಿಕನ ಮನೆಗೆ ಬರುವ ಕೃಷ್ಣ ಪಾತ್ರ ಸುದೀಪ್ ಅವರದ್ದು. ಹೀಗೆ ದೇವಲೋಕದಿಂದ ಭೂಲೋಕಕ್ಕೆ ಬರುವ ಮುರಾರಿಗೆ ಚಿತ್ರದಲ್ಲಿ ವಿಶೇಷವಾದ ಬೈಕನ್ನು ಸಿದ್ಧ ಮಾಡಲಾಗಿತ್ತು.
ಇದೇ ಬೈಕ್ ಈಗ ಹರಾಜಿಗಿದೆ!. ಉಪೇಂದ್ರ-ಸುದೀಪ್ ಜಂಟೊಯಾಗಿ ಹರಾಜಿಗಿಟ್ಟಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಚಿತ್ರಮಂದಿರದ ಮುಂಭಾಗದಲ್ಲಿ ಈಗಾಗಲೇ ಈ ವಿಶೇಷ ಬೈಕನ್ನು ಪ್ರದರ್ಶನಕ್ಕಿಡಲಾಗಿದ್ದು, ಇದೇ ತಿಂಗಳಿನ 11ಕ್ಕೆ ಹರಾಜು ನಡೆಯಲಿದೆ. ವಿಶೇಷವಾಗಿ ಸುದೀಪ್'ಗಾಗಿಯೇ ಈ ಬೈಕನ್ನು ವಿನ್ಯಾಸ ಮಾಡಲಾಗಿತ್ತು. 35 ದಿನಗಳ ಅವಧಿಯಲ್ಲಿ 'ಮುಂಬೈ ಶಾಪರ್ಸ್' ಕಂಪೆನಿ ಇದನ್ನು ತಯಾರಿಸಿತ್ತು. 'ಚಿತ್ರದಲ್ಲಿನ ಸುದೀಪ್ ಪಾತ್ರ ಮತ್ತು ಬೈಕ್'ಗಳ ಮೇಲಿನ ಕಿಚ್ಚನ ಪ್ರೀತಿಯ ಬಗ್ಗೆ ಮುಂಬೈ ಕಂಪೆನಿಗೆ ವಿವರಿಸಿದ್ದೆವು. ನಮ್ಮ ಕಲ್ಪನೆಗಿಂತಲೂ ಚೆನ್ನಾಗಿ ಈ ಬೈಕನ್ನು ತಯಾರಿಸಲಾಗಿದೆ' ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್.
ಒಟ್ಟು 11 ಲಕ್ಷ ವೆಚ್ಚದಲ್ಲಿ ಈ ಬೈಕನ್ನು ತಯಾರಿಸಲಾಗಿದ್ದು, ಇದು ಎಷ್ಟು ಬೆಲೆಗೆ ಹರಾಜಾಗುತ್ತದೆ ಎಂಬುವುದನ್ನು ನ.11ರವರೆಗೆ ಕಾದು ನೋಡಬೇಕಷ್ಟೇ. ಆದರೆ ಈ ಬೈಕ್ ಹರಾಜಿನಲ್ಲಿ ಬಂದ ಹಣವನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಅನ್ನದಾಸೋಹಕ್ಕಾಗಿ ದಾನದ ರೂಪದಲ್ಲಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ವಿತರಕ ಜಾಕ್ ಮಂಜುರವರ ಸಲಹೆ ಮೇರೆಗೆ ಚಿತ್ರತಂಡ ಈ ಬೈಕನ್ನು ಹರಾಜಿಗಿಟ್ಟಿದೆ.
