ಸಿನಿ ಪ್ರೇಕ್ಷಕರಿಗೆ ಡಬಲ್ ಧಮಾಕಾ, ಇಂದು ಸ್ಯಾಂಡಲ್'‌ವುಡ್'ನಲ್ಲಿ ಮೋಸ್ಟ್ ಎಕ್ಸ್ ಪೆಕ್ಟೆಡ್ 2 ಸಿನಿಮಾಗಳು ರಿಲೀಸ್ ಆಗುತ್ತಿವೆ. ನಮ್ಮೂರ ಮಂದಾರ ಹೂವೆಯಲ್ಲಿ ಒಟ್ಟಾಗಿ ಅಭಿನಯಿಸಿದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ರಮೇಶ್ ಅರವಿಂದ್ ಅಭಿನಯದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಎರಡು ಸಿನಿಮಾಗಳು ಯಾವುವು? ಅವುಗಳ ಹೈಲೆಟ್ಸ್ ಏನ್ ಇಲ್ಲಿದೆ ನೋಡಿ
ಸಿನಿ ಪ್ರೇಕ್ಷಕರಿಗೆ ಡಬಲ್ ಧಮಾಕಾ, ಇಂದು ಸ್ಯಾಂಡಲ್'ವುಡ್'ನಲ್ಲಿ ಮೋಸ್ಟ್ ಎಕ್ಸ್ ಪೆಕ್ಟೆಡ್ 2 ಸಿನಿಮಾಗಳು ರಿಲೀಸ್ ಆಗುತ್ತಿವೆ. ನಮ್ಮೂರ ಮಂದಾರ ಹೂವೆಯಲ್ಲಿ ಒಟ್ಟಾಗಿ ಅಭಿನಯಿಸಿದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ರಮೇಶ್ ಅರವಿಂದ್ ಅಭಿನಯದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಎರಡು ಸಿನಿಮಾಗಳು ಯಾವುವು? ಅವುಗಳ ಹೈಲೆಟ್ಸ್ ಏನ್ ಇಲ್ಲಿದೆ ನೋಡಿ
ಶ್ರೀಕಂಠ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಸ್ಯಾಂಡಲ್ವುಡ್ ನಲ್ಲಿ ಸಖತ್ ಸೌಂಡ್ ಮಾಡಿದ ಈ ಸಿನಿಮಾ ಇಂದು ರಾಜ್ಯದ್ಯಂತ ರಿಲೀಸ್ ಆಗುತ್ತಿದೆ. ಸದ್ಯದ ಸಮಾಜದ ವ್ಯವಸ್ಥೆ ಬಗ್ಗೆ ಒಳಗೊಂಡಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪಕ್ಕಾ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರಾವಣಿ ಸುಬ್ರಮಣ್ಯ ಚಿತ್ರದ ಖ್ಯಾತಿಯ ಮಂಜು ಸ್ವರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚಾಂದಿನಿ ಶ್ರೀಧರ್ ಹಿರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಚಂದನವನದಲ್ಲಿ ಟೀಸರ್ ನಿಂದಲೇ ಸೌಂಡ್ ಮಾಡಿದ ಸಿನಿಮಾ ಪುಷ್ಪಕ ವಿಮಾನ. ತ್ಯಾಗರಾಜ ರಮೇಶ್ ಅರವಿಂದ್ ಅಭಿನಯದ 100ನೇ ಸಿನಿಮಾ ಇದು. ತಂದೆ ಮಗಳ ಬಾಂದವ್ಯವನ್ನ ಒಳಗೊಂಡಿರುವ ಈ ಸಿನಿಮಾ ಕೂಡ ಇಂದು100ಕ್ಕೂ ಹೆಚ್ಚು ಥಿಯೇಟರ್'ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ದೊಡ್ಡ ಮಗಳ ಪಾತ್ರದಲ್ಲಿ ರಚಿತರಾವ್ ಕಾಣಿಸಿಕೊಂಡಿದ್ದಾರೆ. ಇನ್ನು ಬೇಬಿ ಯುವಿನಾ ಹಾಗೂ ರಮೇಶ್ ಅರವಿಂದ್ ಬಾಂಧವ್ಯ, ನೋಡುಗರಲ್ಲಿ ಕಣ್ಣೀರು ತರಿಸುವುದರಲ್ಲಿ ಡೌಟೇ ಇಲ್ಲ.
ಬಾಲಿವುಡ್ ನಟಿ ಜೂಹಿ ಚಾವ್ಲಾ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದ್ದು ಪುಷ್ಪಕ ವಿಮಾನ ಚಿತ್ರ ಕೂಡ ಗೆಲ್ಲುವ ಸೂಚನೆ ನೀಡಿದೆ. ಈ ಚಿತ್ರಕ್ಕೆ ಎಸ್ ರವೀಂದ್ರನಾಥ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಜೊತೆಯಾಗಿ ಅಭಿನಯಿಸಿದ ಇಬ್ಬರು ನಟರ ಚಿತ್ರಗಳು, ಒಂದೇ ದಿನ ರಿಲೀಸ್ ಆಗುತ್ತಿದ್ದು, ಯಾವುದಕ್ಕೆ ಪ್ರೇಕ್ಷಕ ಎಷ್ಟು ಮಾರ್ಕ್ಸ್ ಕೊಡುತ್ತಾನೋ ಕಾದು ನೋಡಬೇಕು.
